ಪ್ರತಿಯೊಬ್ಬರು ಮನೆಯಲ್ಲಿ ಹಲವಾರು ಆಹಾರಪದಾರ್ಥ ತಯಾರು ಮಾಡುತ್ತಾರೆ .ಆದರೆ ಉತ್ತರ ಕರ್ನಾಟಕ ಶೈಲಿಯ ಚಟ್ನಿ ಪುಡಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಮೊದಲಿಗೆ ಶೇಂಗ ಚಟ್ನಿಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವು ಎಂದರೆ ಒಂದು ಕಡಲೆಬೀಜ 1 ಕಪ್ ಕಡ್ಲೆ ಹಾಗೂ 1ಕಪ್ ಹುಚ್ಚಳ್ಳು 1ಕಪ್ ಉರುಳಿ 1 ಕಪ್ ಕೊಬ್ಬರಿ ಬೇಕಾಗುತ್ತದೆ. ಎರಡು ಚಮಚ ಜೀರಿಗೆ ಹಾಗೂ ಸ್ವಲ್ಪ ಬೆಳ್ಳುಳ್ಳಿ 2 ಚಮಚ ಸಕ್ಕರೆ ಬೇಕಾಗುತ್ತದೆ .ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಬೇವು ಸೊಪ್ಪು ಹಾಗೂ ಅಚ್ಚಕಾರದ ಪುಡಿ ಬೇಕಾಗುತ್ತದೆ ಪದಾರ್ಥಗಳು 5 ಚಟ್ನಿಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು ಆಗಿರುತ್ತದೆ. ಮೊದಲಿಗೆ ಶೇಂಗ ಚಟ್ನಿಪುಡಿ ಮಾಡಲು ಹೇಗೆ ಎಂದರೆ ಒಂದು ಬಾಣಲೆಯಲ್ಲಿ ಶೇಂಗಾ ಬೀಜವನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಅದೇ ಬಾಣಲೆಯಲ್ಲಿ ಹುಚ್ಚಳ್ಳು ಹುರಿದುಕೊಳ್ಳಬೇಕು ಇದು ಚಟಪಟ ಅನ್ನುವ ಶಬ್ದ ಆಗುವ ರೀತಿ ಹುರಿದುಕೊಳ್ಳಬೇಕು. ನಂತರ ಮೂರನೇದಾಗಿ ಅಗಸೆ ಬೀಜ ಸ್ವಲ್ಪ ನೀರನ್ನು ಬೆರೆಸಿ ಹುರಿದುಕೊಳ್ಳಬೇಕು.
ನಂತರ ಕಡಲೆ ಬೀಜ ಸಿಪ್ಪೆ ಯನ್ನು ಚೆನ್ನಾಗಿ ತೆಗೆದುಹಾಕಬೇಕು ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಅದರ ಜೊತೆಗೆ ಅಚ್ಚಕಾರದ ಪುಡಿ ಹಾಕಬೇಕು ಸ್ವಲ್ಪ ಜೀರಿಗೆ ಮತ್ತು ಸಕ್ಕರೆ ಹಾಗೂ ಉಪ್ಪು ಬೆಳ್ಳುಳ್ಳಿ ಸ್ವಲ್ಪ ಕೊಬ್ಬರಿ ಹಾಕಿ ಚೆನ್ನಾಗಿ ಮತ್ತೆ ಪುಡಿ ಮಾಡಿಕೊಳ್ಳಬೇಕು ಆಗ ಶೇಂಗ ಚಟ್ನಿಪುಡಿ ರೆಡಿ ಯಾಗುತ್ತದೆ ನಂತರ ಎರಡನೆಯದು ಹುಚ್ಚೆಳ್ಳು ಮಿಕ್ಸಿಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಅಚ್ಚಖಾರದ ಪುಡಿ ಕರಿಬೇವು ಸೊಪ್ಪು ಜೀರಿಗೆ ಎಲ್ಲವನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು .ಆಗ ಚಟ್ನಿ ಪುಡಿ ರೆಡಿಯಾಗುತ್ತದೆ ಇನ್ನು ಮೂರನೆಯದು ಕೊಬ್ಬರಿ ಪುಡಿ ಹಾಗೂ ಸ್ವಲ್ಪ ಅಚ್ಚ ಖಾರದ ಪುಡಿ ಕರಿಬೇವು ಸೊಪ್ಪು ಜೀರಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು .ಆಗ ಕೊಬ್ಬರಿ ಚಟ್ನಿ ಪುಡಿ ರೆಡಿಯಾಗುತ್ತದೆ ನಂತರ ಹುರಿಗಡಲೆ ಅದಕ್ಕೆ ಅಚ್ಚಕಾರದ ಪುಡಿ ಕರಿಬೇವು ಸೊಪ್ಪು ಬೆಳ್ಳುಳ್ಳಿ ಜೀರಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡರೆ ಹುರಿಗಡಲೆ ಚಟ್ನಿ ಪುಡಿ ರೆಡಿಯಾಗುತ್ತದೆ. ಇದೇ ರೀತಿ ಮನೆಯಲ್ಲಿ ಸುಲಭ ವಿಧಾನದಲ್ಲಿ ಉತ್ತರ ಕರ್ನಾಟಕ ಶೈಲಿಯ ಚಟ್ನಿಪುಡಿ ರೆಡಿ ಮಾಡಿಕೊಳ್ಳಬಹುದು ಪ್ರತಿಯೊಬ್ಬರು ಈ ರೀತಿ ಮಾಡಿ ತುಂಬಾ ರುಚಿಯಾಗಿರುತ್ತದೆ.
