Fri. Mar 1st, 2024

ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ನಡೆಯಿತು ಬೃಹತ್ ಪವಾಡ…ವೈಜ್ಞಾನಿಕವಾಗಿ ಮತ್ತು ಭೌಗೋಳಿಕವಾಗಿ ಗಮನಿಸಿದಾಗ ಈ ಸ್ಥಳ ದಟ್ಟ ಕಾಡುಗಳಿಂದ ಆವೃತ್ತವಾಗಿದ್ದು ವಾಸಕ್ಕೆ ಯೋಗ್ಯವಾಗಿದೆ ವಿಪರೀತ ವಾದಂತಹ ಕಾಡುಪ್ರಾಣಿಗಳು ಇದ್ದ ಸ್ಥಳದಲ್ಲಿ ಯೋಗಿಗಳು ತಪಸ್ಸು ಮಾಡಲು ಈ ಸ್ಥಳದಲ್ಲಿ ಬೀಡು ಬಿಡುತ್ತಿದ್ದರು ಎಂದು ನಂಬಲಾಗಿದೆ. ಮನುಷ್ಯರಿಲ್ಲದ ದಟ್ಟಕಾಡು ಅದಾಗಿದ್ದರಿಂದ ತಪಸ್ಸು ಮಾಡಲು ಯೋಗ್ಯವಾದ ಸ್ಥಳ ಅಂತ ಋಷಿಮುನಿಗಳು ಇದನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಕಾರಣಕ್ಕಾಗಿ ದೇಶದ ಹಲವಾರು ಋಷಿ ಮುನಿಗಳು ಈ ಒಂದು ಸ್ಥಳಕ್ಕೆ ಬಂದು ವಾಸಮಾಡುತ್ತಿದ್ದರು. ಕಾಲ ಕ್ರಮೇಣ ಈ ಒಂದು ಪ್ರದೇಶದಲ್ಲೂ ಕೂಡ ಈಗ ಕಾಡು ನಾಶವಾಗುತ್ತಿದೆ ಆದರೂ ಈ ದಟ್ಟಕಾಡಿನ ವೈಭವ ಈಗಲೂ ಕೂಡ ಇಲ್ಲಿ ಅಲ್ಪ ಸ್ವಲ್ಪ ಇದೆ ಅಂತಾನೆ ಹೇಳಬಹುದು. ಇದುವೆ ಚಾಮರಾಜನಗರ ಜಿಲ್ಲೆಯ ಪೂರ್ವ ದಿಕ್ಕಿನಲ್ಲಿ ಇರುವಂತಹ ಪ್ರಕೃತಿ ರಮಣೀಯ ವನಸಿರಿಯಲ್ಲಿರುವ ಪವಿತ್ರ ಪುಣ್ಯಕ್ಷೇತ್ರ ಮಹದೇಶ್ವರ ಬೆಟ್ಟ.

ಮೈಸೂರಿನಿಂದ 185 ಕಿಲೋಮೀಟರ್, ಚಾಮರಾಜನಗರದಿಂದ 115 ಕಿಲೋಮೀಟರ್, ಕೊಳ್ಳೇಗಾಲದಿಂದ 78 ಕಿಲೋಮೀಟರ್ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 208 ಕಿಲೋಮೀಟರ್ ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟ ಎಂಎಂ ಹಿಲ್ಸ್ ಎಂದೇ ಪ್ರಖ್ಯಾತಿ ಆಗಿದೆ. ಮಲೆಮಹದೇಶ್ವರ ಬೆಟ್ಟ ಸಮುದ್ರ ಮಟ್ಟಕ್ಕಿಂತ ಸುಮಾರು 3 ಸಾವಿರ ಅಡಿ ಎತ್ತರದಲ್ಲಿದೆ. ಹಸಿರಿನ ಕಾನನದಲ್ಲಿ ಇರುವ 77 ಬೆಟ್ಟದ ವಿಶಾಲವಾದ ಪ್ರಧಾನ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ತಪಸ್ಸನ್ನು ಆಚರಿಸಿ ಇಲ್ಲಿ ನೆಲೆಗೊಂಡಿದ್ದಾರೆ ಎಂಬ ಇತಿಹಾಸವಿದೆ. 15ನೇ ಶತಮಾನದಲ್ಲಿ ಜೀವಿಸಿದರು ಮತ್ತು ಹಲವಾರು ಸಮಸ್ಯೆಗಳನ್ನು ತಮ್ಮ ಅಲೌಕಿಕ ಶಕ್ತಿಯಿಂದ ಪರಿಹರಿಸಿದ ದೇವಾಂಶ ಸಂಭೂತರೆಂದು ಹೇಳಲಾಗುವ ಜನಪದರ ಆರಾಧ್ಯ ದೈವನಿಗೆ ಇಲ್ಲಿ ಒಂದು ದೇವಸ್ಥಾನವಿದೆ.