Fri. Mar 1st, 2024

ಪ್ರತಿಯೊಬ್ಬರ ಮನೆಯಲ್ಲಿ ಹಬ್ಬ ಬಂತು ಎಂದರೆ ವಿಶೇಷವಾದ ಸಿಹಿ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಆದರೆ ಈ ಸಲ ಮಾರ್ಚ್ 11ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮನೆಯಲ್ಲಿ ನೀವು ರವೆ ತಂಬಿಟ್ಟು ಮಾಡಿದರೆ ತುಂಬಾ ಚೆನ್ನಾಗಿರುತ್ತದೆ ಮನೆಯಲ್ಲಿ ತುಂಬಾ ಖುಷಿ ಪಡುತ್ತಾರೆ .ಇದನ್ನು ಹೇಗೆ ಮಾಡುವುದು ಎಂದರೆ ಮೊದಲಿಗೆ ಒಂದು ಬಾಣಲೆಯಲ್ಲಿ ಅರ್ಧ ಕೆಜಿ ಉಪ್ಪಿಟ್ಟು ರವೆ ಅಥವಾ ಚಿರೋಟಿ ರವೆ ಹಾಗೂ ಬನ್ಸಿ ರವೆ ಕೂಡ ಬಳಸಬಹುದು ಇದನ್ನ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಒಂದು ಚಮಚ ಅದಕ್ಕೆ ತುಪ್ಪ ಬೆರೆಸಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ರವೆ ತಣ್ಣಗಾಗಲು ಬಿಡಬೇಕು ನಂತರ ಅರ್ಧ ಕಪ್ ಕಪ್ಪು ಎಳ್ಳನ್ನು ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು ಇದು ರವೆ ತಂಬಿಟ್ಟು ತುಂಬಾ ಚೆನ್ನಾಗಿರುತ್ತದೆ ನಂತರ ತಣ್ಣಗಾದ ರವೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.

ನಂತರ ಒಂದು ಕಪ್ ಕಡಲೆ ಬೀಜವನ್ನು ಒಂದು ರೌಂಡ್ ಪುಡಿ ಮಾಡಿಕೊಂಡಿರುವುದನ್ನು ಅದಕ್ಕೆ ಬೆರೆಸಬೇಕು ಇದು ತುಂಬಾ ಚೆನ್ನಾಗಿರುತ್ತದೆ.ನಂತರ ಹುರಿದ ಕಪ್ಪುಎಳ್ಳು ಹಾಗೂ ಅರ್ಧ ಕಪ್ ಉರುಗಡಲೆ ನ ಅದಕ್ಕೆ ಬೆರೆಸಬೇಕು .ಇದನ್ನು ಹಾಕಿದರೆ ತುಂಬಾ ಚೆನ್ನಾಗಿರುತ್ತದೆ ರವೆ ತಂಬಿಟ್ಟು ಹಾಗೂ 1 ಕಪ್ ಒಣಕೊಬ್ಬರಿ ಹಾಕಬೇಕು ಹಾಗೂ ಎರಡು ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಬೆಲ್ಲದ ಪಾಕ ಮಾಡಿಕೊಳ್ಳಬೇಕು 1 ಕಪ್ ಬೆಲ್ಲವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಪಾಕ ಮಾಡಿಕೊಳ್ಳಬೇಕು ನಂತರ ರೆಡಿ ಆಗಿರುವ ರವೆ ಮಿಕ್ಸ್ ಗೆ ಅದನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಉಂಡೆ ಕಟ್ಟಿಕೊಳ್ಳಬೇಕು ಆಗ ರವೆ ತಂಬಿಟ್ಟು ತುಂಬಾ ಚೆನ್ನಾಗಿರುತ್ತದೆ. ಈ ರೀತಿ ಹಬ್ಬದ ದಿನ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ ಮನೆಯವರೆಲ್ಲ ತುಂಬಾ ಖುಷಿಪಡುತ್ತಾರೆ ಮನೆಯಲ್ಲಿ ಒಂದು ಬಾರಿ ಮಾಡಿ ಉತ್ತಮ ಫಲಿತಾಂಶ ಇರುತ್ತದೆ.