Mon. Aug 8th, 2022

ನಾವು ತುಂಬಾ ಹೆಣ್ಣುಮಕ್ಕಳನ್ನು ನೋಡುತ್ತಿರುತ್ತೇವೆ ವಿಟಮಿನ್ ಮತ್ತು ಮಿನರಲ್ ಡಿಫಿಷಿಯನ್ಸಿ ಇರುತ್ತೆ ಅದಕ್ಕೆ ಮೂಲ ಕಾರಣ ಏನು ಎಂದು ತಿಳಿದೂ ಕೊಳ್ಳೋಣ. ಡಿಫಿಷಿಯನ್ಸಿ ಇದ್ದಾಗ ನಾವು ಮಾತ್ರೆ, ಪೌಡರ್ಗಳನ್ನು ತೆಗೆದುಕೊಳ್ಳುತ್ತೆವೆ ಆದ್ರೆ ಮೂಲವಾಗಿ ಏನು ಕಾರಣ ಇಲ್ಲಿ ಉದ್ಭವವಾಗುತಿರುವ ಸಮಸ್ಯೆ ಯಾವುದರಿಂದ ಎಂದು ನಾವು ಅರ್ಥಮಾಡಿಕೊಂಡು ಅದರಿಂದ ಹೊರಬಂದರೆ ಪರಮನೆಂಟ್ ಸಲ್ಯೂಷನ್ ಸಿಗುತಾದೆ. ನಮ್ಮ ಬದುಕಿನಲ್ಲಿ ಆಗುತಿರುವ ಎಲ್ಲ ಡಿಫಿಷಿಯನ್ಸಿ ಗಳಿಗೆ ಮೂಲಕಾರಣ ವಿಟಮಿನ್-ಡಿ ಕೊರತೆ, ಸಮರ್ಪಕವಾಗಿ ನಮ್ಮ ದೇಹದಲ್ಲಿ ವಿಟಮಿನ್ ಡಿ ಇರುವುದಿಲ್ಲ ಇದು ಕಡಿಮೆ ಇದ್ದರೆ ಮಾತ್ರ ನಮ್ಮ ದೇಹದಲ್ಲಿ ಬೇರೆ ನ್ಯೂಟ್ರಿಷನ್, ವಿಟಮಿನ್, ಮಿನರಲ್ಸ್, ಕ್ಯಾಲಿಸಿಯಂ, ಐರನ್ ಇತರ ವಿಟಮಿನ್ಗಳು ನಮ್ಮ ದೇಹದಲ್ಲಿ ಚೆನಗೀ ಅಬ್ಸೋರ್ಬ್ ಆಗುವುದಿಲ್ಲ ಆದ್ದರಿಂದ ವಿಟಮಿನ್-ಡಿ ತುಂಬಾ ಸಮರ್ಪಕವಾಗಿ ನಮ್ಮ ದೇಹದಲ್ಲಿ ಇದ್ದಾಗ ಮಾತ್ರ ಬೇರೆ ವಿಟಮಿನ್ಗಳು ಚೆನ್ನಾಗಿ ಅಬ್ಸೋರ್ಬ್ ಆಗುತ್ತದೆ.

ವಿಟಮಿನ್-ಡಿ ಸಮರ್ಪಕವಾಗಿ ನಮ್ಮ ದೇಹಕ್ಕೆ ಸಿಗಬೇಕು ಅಂದರೇ ನಾವು ಪ್ರತೀ ದಿನ ನಮ್ಮ ದೇಹವನ್ನು ಸೂರ್ಯನ ಕಿರಣಗಳ ಸಂಪರ್ಕಕ್ಕೆ ತರಬೇಕು. ಅದ್ದಕೆ ನೋಡಿ ಹೆಣ್ಣು ಮಕ್ಕಳು ಸೀರೆ ಹುಡುವ ರೀತಿಯನ್ನು ನೀವು ನೋಡಿದರೆ ತಿಳಿಯುತ್ತದೇ ಬಿಸಿಲು ಎಲ್ಲಿ ಬಿದ್ದರೆ ಒಳ್ಳೆಯದು. ನಿಮ್ಮ ಮೇರೂ ದಂಡಕ್ಕೆ ಅಂದರೆ( ಬ್ಯಾಕ್ ಬೋನ್) ಹಾಗೂ ನಿಮ್ಮ ನಾಬೀಗೆ ಭಾಗಕ್ಕೆ ( ಹೊಕ್ಕಳು) ತಾಕಿದರೇ ತುಂಬಾ ಒಳ್ಳೆಯದ. ಅದ್ಧಕೆ ನಾವು ಹೆಣ್ಣು ಮಕ್ಕಳು ಸೀರೆ ಹುಡುವ ನಮ್ಮ ಸಂಸ್ಕೃತಿಯಲ್ಲಿ ಬೆನ್ನಿನ ಭಾಗ ತೆರೆದಿರುತ್ತದೆ ಏಕೆಂದರೆ ಸೂರ್ಯನ ಕಿರಣಗಳು ಬೆನ್ನಿಗೆ ತಗಲಿ ಅಂತ ಮತ್ತು ಸೀರೆ ಹುಡುವ ರೀತಿ ನೋಡಿದಾಗ ಕೂಡ ನಮ್ಮ ಹೊಕ್ಕಳಿನ ಭಾಗ ತೆರೆದಿರುತ್ತದೆ

ಇದರ ಅರ್ಥ ಸೂರ್ಯನ ಕಿರಣಗಳು ನಮ್ಮ ನಬಿಗೆ ಬೀಳಲಿ ಎಂದು. ನೀವು ಬೆಳಿಗ್ಗೆ ಎಂಟರಿಂದ ಹತ್ತು ಗಂಟೆಗೆ ಹೊಳಗೆ ಹೊರಗೆ ಬಂದರೆ ನಿಮಗೆ ತುಂಬಾ ಸಮರ್ಪಕವಾದ ಒಳ್ಳೆಯ ವಿಟಮಿನ್-ಡಿ ಸಿಗುತ್ತದೆ. ಇದರಿಂದ ನಿಮ್ಮ ದೇಹ ಬೇರೆ ವಿಟಮಿನ್, ಕ್ಯಾಲಿಸಿಯಂ, ಐರನ್ ಡಿಫಿಷಿಯನ್ಸಿ ಕಡಿಮೆಯಾಗುತ್ತದೆ.ಮತ್ತು ಸಮತೋಲನ ಆಹರವನ್ನು ಸವಿಸಿ ಇದರಿಂದ ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ದೊರೆಯುತ್ತದೆ ಮತ್ತು ಬಿಸಿಲಿನಲ್ಲಿ ನಿಲ್ಲುವುದರಿಂದ ಆಹರದಲ್ಲಿ ಇರರುವ ವಿಟಮಿನ್, ಮಿನರಲ್ಸ್ ಎಲ್ಲವನ್ನು ನಮ್ಮ ದೇಹ ಅಬ್ಸೋರ್ಬ್ ಮಾಡಿ ಕೊಳ್ಳುತ್ತದೆ. ಮತ್ತೊಂದು ವಿಧಾನವೇನೆಂದರೆ ಬೆಳಿಗ್ಗೆ ಬಿಸಿಲಿಗೆ ನಿಲ್ಲುವ ಮೊದಲು ಮೈಯೀಗೆ ಕಬ್ಬರಿ ಎಣ್ಣೆ ಅಥವಾ ಹರಳು ಎಣ್ಣೆ ಹಚ್ಚಿ ಬಿಸಿಲಿಗೆ 10 ನಿಮಿಷ ನಿಂತು ನಂತರ ನೀವು ಸ್ನಾನ ಮಾಡಿಕೊಳ್ಳ ಬಹುದು ಇದರಿಂದ ಎಚ್ಚಿನ ಲಾಭ ದೊರೆಯುತ್ತದೆ.