ಈ ದಿನದ ರಾಶಿಫಲ ಹೇಗಿದೆ ಹಾಗೂ ಯಾವ ರಾಶಿಯವರಿಗೆ ಎನು ಯೋಗ ಇದೆ ಎಂಬುದರ ಸಂಪೂರ್ಣ ಮಾಹಿತಿ.
ಮೇಷ ರಾಶಿ: ಈ ರಾಶಿಯವರಿಗೆ ಈ ದಿನ ಲಾಭ ಅಂತ ಹೇಳಬಹುದು. ಇವತ್ತು ನಿಮ್ಮ ಹತ್ತಿರದ ಸಂಬಂಧದ ಯಾರಾದರೂ ನಿಮ್ಮಮನೆಗೆ ಅತಿಥಿಯಾಗಿ ಆಗಮಿಸಬಹುದು ಹಾಗೂ ದೂರದ ಪ್ರಯಾಣ ಮಾಡುವಂತಹ ಸಂದರ್ಭವಾದರು ಬರುತ್ತದೆ. ಪಕ್ಷಿಗಳಿಗೆ ಎನಾದರೂ ಕಾಳುಗಳನ್ನು ಹಾಕುವುದರಿಂದ ಹೆಚ್ಚಿನ ಲಾಭ ಅಂತನೆ ಹೇಳಬಹುದು. ಈ ರಾಶಿಯ ಇಂದಿನ ಅದೃಷ್ಟದ ಸಂಖ್ಯೆ 5.
ವೃಷಭ ರಾಶಿ: ಈ ರಾಶಿಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಕಿರಿಕಿರಿ ಹಾಗೂ ಮನಸಿಗೆ ಬೇಸರ ತರುವ ದಿನ. ಇಂದು ಮನೆಯಲ್ಲಿ ಸಾಧ್ಯವಾದಷ್ಟು ಶಾಂತಿಯಾಗಿರೊಕೆ ಪ್ರಯತ್ನಿಸಿ. ಹೆಣ್ಣು ಮಕ್ಕಳು ಕೆಂಪು ಬಣ್ಣದ ವಸ್ತ್ರ ಧರಿಸಿ ಹೊರಗೆ ಹೋಗಬೇಡಿ. ನಿಮ್ಮ ಇಂದಿನ ಅದೃಷ್ಟದ ಸಂಖ್ಯೆ. 8
ಮಿಥುನ ರಾಶಿ: ಈ ರಾಶಿಯವರು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸಹೋದರ ಅಥವಾ ಸಹೋದರಿಯರ ನಡುವೆ ಕಲಹ ಬರುವ ದಿನ. ನಿಮ್ಮ ಮನೆಯಲ್ಲಿರುವ ತುಳಸಿಗೆ ನಮಸ್ಕರಿಸಿ ದೀಪ ಹಚ್ಚೊದರಿಂದ ಮನೆ ಕಟ್ಟುವ ವಿಚಾರದಲ್ಲಿ ನಿಮಗೆ ಹಣಕಾಸಿನ ಲಭ್ಯವಾಗುವ ಸೂಚನೆ ಸಿಗುವ ದಿನ ಇದು. ನಿಮ್ಮ ಅದೃಷ್ಟದ ಸಂಖ್ಯೆ 3.
ಕಟಕ ರಾಶಿ: ಈ ರಾಶಿಯವರು ಭಾವುಕರಾಗಬೇಡಿ ಕಳೆದು ಹೋದದ್ದು ಕಳೆದು ಹೋಗಲಿ, ಮನಸಿಗೆ ಶಾಂತಿ ಬೇಕೆಂದರೆ ನಿಮ್ಮ ಆಪ್ತರೊಡನೆ ಮಾತನಾಡಿ ಹಾಗೂ ಮನೆ ದೇವರಿಗೆ ಪ್ರಾರ್ಥನೆಮಾಡೊದರಿಂದ ಈ ದಿನ ವಿಶೇಷ ಫಲ ಪಡೆಯುತ್ತಿರಾ. ಇಂದಿನ ಅದೃಷ್ಟ ಸಂಖ್ಯೆ 4.
ಸಿಂಹ ರಾಶಿ: ಈ ರಾಶಿಯವರಿಗೆ ಸುಖಪ್ರಾಪ್ತಿಯಾಗುವ ದಿನ ನೀವು ಇಂದು ಯಾವುದೆ ಕೆಲಸ ಮಾಡಿದರು ಜಯ ಆದರೆ ಉತ್ತರಭಾಗದ ಕಡೆ ಪ್ರಯಾಣ ಮಾಡಬೇಡಿ ಇದರಿಂದ ನಿಮಗೆ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚು. ಇನ್ನು ನಿಮ್ಮ ಈ ದಿನದ ಅದೃಷ್ಟದ ಅಂಖ್ಯೆ 6.
ಕನ್ಯಾ ರಾಶಿ: ಕನ್ಯಾರಾಶಿಯವರು ಜಾಗೃತರಾಗಿರಿ ನಂಬಿದ ವ್ಯಕ್ತಿಗಳಿಂದ ನಿಮಗೆ ಅನ್ಯಾವಾಗುತ್ತಿರುವುದು ಗೋಚರವಾಗುತ್ತದೆ ಹಾಗೂ ಮೋಸದ ಜಾಲಕ್ಕೆ ಸಿಲುಕಿರುವುದು ಬಯಲಾಗುವುದು, ಕಾನೂನು ಕಛೇರಿ ಅಲೆಯುವ ಸಮಯ ಬರಬಹುದು.ಮನೆ ದೇವರ ಆರಾಧನೆಮಾಡಿ. ನಿಮ್ಮಅದೃಷ್ಟದ ಸಂಖ್ಯ 2.
ತುಲಾ ರಾಶಿ: ಕಾಯುವ ಗುಣವಿರುವ ನಿಮಗೆ ಒಳಿತೆ ಆಗುತ್ತದೆ ಆದರೆ ನೆರೆಮನೆಯವರ ಜೊತೆ ಅತೀ ವಿಶ್ವಾಸ ನಿಮ್ಮನು ಕಷ್ಟಕೆ ದೂಡುವ ಪರಿಸ್ಥಿತಿ ತಂದಿಡುತ್ತದೆ ಹಾಗಾಗಿ ಅತೀಯಾದರೆ ಅಮೃತವು ವಿಷವಾಗುತ್ತದೆ ಬಹಳ ಎಚ್ಚರಿಕೆಯಿಂದ ಇರಿ. ನಿಮ್ಮ ಅದೃಷ್ಟದ ಸಂಖ್ಯೆ 3.
ವೃಶ್ಚಿಕ ರಾಶಿ: ದೂರದ ಪ್ರಯಾಣದ ಯೋಗ ಜೊತೆಗೆ ಧನಲಾಭವಾಗುತ್ತದೆ. ಬಹುದಿನದ ನಿಮ್ಮ ಕನಸು ನನಸಾಗಿಸುವಂತಹ ದಿನವಿದು ನಿಮ್ಮಇಷ್ಟ ದೈವದ ಪ್ರಾರ್ಥನೆ ಮಾಡಿದರೆ ಮತ್ತಷ್ಟು ಶುಭಕರ. ಇಂದಿನ ಅದೃಷ್ಟದ ಸಂಖ್ಯೆ 9.
ಧನು ರಾಶಿ: ಸ್ನೇಹಿತರ ಜೊತೆ ಖುಷಿಯಾಗಿ ಕಾಲಕಳೆಯುತ್ತಿರಾ. ಚಿನ್ನದ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ. ಹೆಣ್ಣು ಮಕ್ಕಳ ಬಹುದಿನದ ಕನಸು ನನಸಾಗುವ ದಿನವಿದು. ಅದೃಷ್ಟದ ಸಂಖ್ಯೆ 1.
ಮಕರ ರಾಶಿ : ವಾಹನ ಖರೀದಿ ಮಾಡಿತ್ತಿರಾ ಹೆಂಗಸರಿಗೆ ಬಹಳಾನೆ ಒಳ್ಳೆಯದು ಆದರೆ ಗಂಡ ಹೆಂಡತಿ ನಡುವೆ ಮೂರನೆಯವರ ಮಾತಿಗೆ ಜಗಳವಾಡುವ ಸಂದರ್ಭ ಎದುರಾಗಬಹುದು ಹಾಗಾಗಿ ಜಾಗೃತರಾಗಿರಿ. ಅದೃಷ್ಟದ ಸಂಖ್ಯೆ 3.
ಕುಂಭ ರಾಶಿ : ರಿಯಲ್ ಎಸ್ಟೆಟ್ ಕೆಲಸದವರಿಗೆ ಅನೀರಿಕ್ಷಿತ ಧನಾಗಮನ ಜೊತೆಗೆ ಹೊಸ ಜನರ ಪರಿಚಯದಿಂದ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಅತ್ಯಂತ ಯೋಚನಾ ದಿನ. ಮಹಿಳೆಯರು ಹೊರ ಹೋಗದೆ ಇದ್ದರೆ ನಿಮಗೆ ಒಳಿತು.ಅದೃಷ್ಟದ ಸಂಖ್ಯೆ 7.
ಮೀನ ರಾಶಿ : ಮಕ್ಕಳಿರುವ ಮನೆಯಲ್ಲಿಜಾಗೃತರಾಗಿರಿ ಯಾಕೆಂದರೆ ನಿಮ್ಮ ಮಕ್ಕಳಿಗೆ ಅಪಘಾತವಾಗುವ ದಿನ ಹಾಗೂ ನೆಮ್ಮದಿ ಇಲ್ಲದ ವಾತಾವರಣ ಬರಬಹುದು. ನಿಮ್ಮ ಮನೆದೇವರ ಹೆಸರಲಿ ದೀಪ ಹಚ್ಚಿ ಪ್ರಾರ್ಥನೆಮಾಡಿ. ಅದೃಷ್ಟದ ಸಂಖ್ಯೆ. 5.