Sat. Jun 25th, 2022

ಹೆಣ್ಣುಮಕ್ಕಳಿಗೆ ಸೌಂದರ್ಯ ನೋಡು ತುಂಬಾನೇ ಮುಖ್ಯ ಅದರಲ್ಲೂ ಅವರ ಮುಖ ಚೆನ್ನಾಗಿ ಕಾಣಬೇಕಾದರೆ ಏನು ಬೇಕಾದರೂ ಮಾಡುತ್ತಾರೆ ಅಂತದ್ದರಲ್ಲಿ ನಮ್ಮ ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಅದನ್ನು ಹೇಗೆ ಒಲಿಸಿಕೊಳ್ಳುವುದು ಮತ್ತು ಅದಕ್ಕೆ ನಾವು ಮನೆಯಲ್ಲೇ ಮನೆಮದ್ದನ್ನು ತಯಾರಿಸಿಕೊಳ್ಳುವುದು ಎಂದು ನೋಡೋಣ ಬನ್ನಿ. ಈ ಮನೆಮದ್ದನ್ನು ಹತ್ತರಿಂದ ಹದಿನೈದು ನಿಮಿಷ ಹಾಕಿದರೆ ಸಾಕು ನಿಮ್ಮ ಮುಖದಲ್ಲಿರುವ ಕಲೆಯಲ್ಲ ಮಾಯವಾಗುತ್ತದೆ ಹಾಗಾದರೆ ಆ ಮನೆಮದ್ದು ಯಾವುದು ಎಂದು ನೋಡೋಣ ಬನ್ನಿ.

ಈ ಮನೆಮದ್ದನ್ನು ತಯಾರಿಸಲು ಬೇಕಾದ ಸಾಮಾಗ್ರಿ ಒಂದು ಸ್ವಲ್ಪ ಗಂಧದ ತುಂಡು ಮತ್ತು ಜೇನುತುಪ್ಪ ಒಂದು ನಿಂಬೆಹಣ್ಣು ಸ್ವಲ್ಪ ಅರಿಶಿನ ಕೊಂಬು ಹಾಗೂ ಬೆಣ್ಣೆ ಇವಾಗ ಯಾವ ರೀತಿ ತಯಾರು ಮಾಡುವುದು ನೋಡೋಣ ಒಂದು ಕಲ್ಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಣ್ಣೆಯನ್ನು ಹಾಕಿ ಅದರ ಮೇಲೆ ಗಂಧದ ತುಂಡನ್ನು ಉಜ್ಜ ಬೇಕು ಉಜ್ಜಿ ಅರ್ಧ ಚಮಚ ಆಗುವಷ್ಟು ತೆಗೆಯಬೇಕು ನಂತರ ಅರಿಶಿನವನ್ನು ಅದೇ ರೀತಿ ಉಜ್ಜಿಕೊಳ್ಳಬೇಕು ಇದಕ್ಕೆ ಸ್ವಲ್ಪ ನಿಂಬೆರಸವನ್ನು ಹಾಕಿಕೊಳ್ಳಬೇಕು ಸ್ವಲ್ಪ ಹನಿಯನ್ನು ಹಾಕಿಕೊಳ್ಳಬೇಕು.

ಪೂರ್ತಿಯಾಗಿ ಎಲ್ಲದನ್ನು ಮಿಕ್ಸ್ ಮಾಡಿ ಪೇಸ್ಟ್ ರೀತಿ ತಯಾರಿಸಿಕೊಳ್ಳ ಬೇಕು ಈ ಪೇಸ್ಟನ್ನು ನೀವು ಒಂದು ತಿಂಗಳು ಹಚ್ಚಿ ನೋಡು ನಿಮ್ಮ ಮುಖದ ಮೇಲಿರುವ ಕಲೆಗಳು ಎಷ್ಟು ಚೆನ್ನಾಗಿ ಹೋಗಿರುತ್ತದೆ ಇವಾಗ ಪೇಸ್ಟ್ ರೆಡಿಯಾಗಿದೆ ಇದನ್ನು ಮುಖಕ್ಕೆ ಯಾವ ರೀತಿ ಹಚ್ಚಿಕೊಳ್ಳು ವುದು ಎಂದು ಹೇಳಿಕೊಡುತ್ತೇನೆ. ಮುಖವನ್ನು ಚೆನ್ನಾಗಿ ತೊಳೆದು ಕೊಂಡು ಪೇಸ್ಟನ್ನು ಹಚ್ಚಿಕೊಳ್ಳಬೇಕು ಕೆಲವರಿಗೆ ಕಣ್ಣಿನ ಕೆಳಗಡೆ ಮತ್ತು ಘಟ್ಟದ ಸುತ್ತ ಮೂಗಿನ ಸೈಡಲ್ಲಿ ಕಪ್ಪಾಗುತ್ತದೆ ಆ ಜಾಗಕ್ಕೆ ಜಾಸ್ತಿಯಾಗಿ ಹಚ್ಚಿ ಹಚ್ಚಿ ಮಸಾಜ್ ಮಾಡಿ ನಂತರ ಮಾಮೂಲಿ ನೀರಿನಲ್ಲಿ ಯಾವುದೇ ತರಹದ ಸೋಪನ್ನು ಹಾಕದೆ ಬರಿ ನೀರಿನಲ್ಲಿ ತೊಳೆಯಿರಿ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ ಮತ್ತು ಮೃದುವಾಗಿರುತ್ತದೆ.