Thu. Jun 30th, 2022

ಮುಖದ ಮೇಲಿನ ಮೊಡವೆ, ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ಸ್, ಮೊಡವೆಯ ಕಲೆಗಳು ಮತ್ತು ಭಂಗನ್ನು ಹೋಗಲಾಡಿಸಲು ಈ ರೆಮಿಡಿ ತುಂಬಾ ಉಪಯೋಗವಾದ ಮಾಹಿತಿ ಆಗಿದೆ. ಈ ಫೇಸ್ ಮಾಸ್ಕ್ ಮಾಡಲು ಯಾವ ವಸ್ತು ಬೇಕು ಮತ್ತು ಅದನ್ನು ಯಾವ ರೀತಿ ಬಳಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ನಮ್ಮ ಮುಖವು ನೈಸರ್ಗಿಕವಾಗಿ ಬೆಳ್ಳಗಾಗಬೇಕು ಮುಖದ ಮೇಲಿನ ಮೊಡವೆಗಳು ಮತ್ತು ಅದರ ಕಲೆಗಳು, ಭಂಗು ಹೋಗಲು‌ ಆಲೂಗಡ್ಡೆ ಉತ್ತಮವಾಗಿ ಕೆಲಸ ಮಾಡುತ್ತದೆ‌. ಆಲೂಗಡ್ಡೆ ಯಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಯೂ ನಮ್ಮ ತ್ವಚೆಗೆ ಹೊಳಪು ಮತ್ತು ಕಲೆಗಳನ್ನು ತೆಗೆದು ಹಾಕುತ್ತದೆ. ಈ ಆಲೂಗಡ್ಡೆ ಫೇಸ್ ಮಾಸ್ಕ್ ತಯಾರಿಸಲು ಒಂದು ಆಲೂಗಡ್ಡೆ ತೆಗೆದುಕೊಂಡು ಚನ್ನಾಗಿ ವಾಶ್ ಮಾಡಿ ನಂತರ ಅದನ್ನು ತುರಿದುಕೊಳ್ಳಿ .

ತುರಿದ ಆಲೂಗಡ್ಡೆ ಯನ್ನು ಚನ್ನಾಗಿ ಕಿವುಚಿ ಅದಕ್ಕೆ ಎರಡು ಚಮಚ ಮೊಸರು ಹಾಕಿ ಮತ್ತೆ ಚನ್ನಾಗಿ ಕಲೆಸಿ ನಂತರ ಮುಖಕ್ಕೆ ಹಚ್ಚಿ. ಹಚ್ಚಿ ಇಪ್ಪತ್ತು ನಿಮಿಷಗಳ ನಂತರ ತಣ್ಣಿರಿಂದ ತೊಳೆಯಿರಿ ಹೀಗೆ ಮಾಡಿದರೆ ಮುಖದ ಮೇಲಿರುವ ಕಪ್ಪು ಕಲೆ , ಭಂಗು ಹೊರಟು ಹೋಗುತ್ತದೆ ಇದನ್ನು ಒಂದು ವಾರ ಬಳಸಿ ನೋಡಿ‌ ನಿಮಗೆ ಉತ್ತಮ ಫಲಿತಾಂಶ ಬಂದಿರುತ್ತದೆ. ಇದನ್ನು ಮೂವತ್ತು ದಿನಗಳವರೆಗೆ ಮಾಡಿದರೆ ಶಾಶ್ವತ ವಾಗಿ ನಿಮ್ಮ ಮುಖದ ಮೇಲಿನ‌ ಕಲೆಗಳು ಭಂಗು, ಮೊಡವೆ ಹೊರಟು ಹೋಗುತ್ತದೆ. ಇನ್ನು ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಹೋಗಲಾಡಿಸಲು ಆಲೂಗಡ್ಡೆ ಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ರಸ ಮಾಡಿಕೊಳ್ಳಿ ನಂತರ ಅದನ್ನು ಮುಖಕ್ಕೆ ಸ್ಪ್ರೆ ಮಾಡಿಕೊಳ್ಳಿ ಇದು ಕ್ಲೆನ್ಸರ್ ತರಹ ವರ್ಕ್ ಆಗುತ್ತದೆ. ಆಲೂಗಡ್ಡೆ ಅತ್ಯಂತ ಔಷಧಿ ಗುಣಗಳನ್ನು ಹೊಂದಿರುವ ನೈಸರ್ಗಿಕ ಪದಾರ್ಥವಾಗಿದೆ. ನಿಮಗೆ ಈ ಮಾಹಿತಿ‌ ಇಷ್ಟವಾದಲ್ಲಿ ಲೈಕ್ ಮಾಡಿ