ಪ್ರತಿಯೊಬ್ಬರು ಹಬ್ಬಗಳು ಬಂತು ಅಂದರೆ ಮನೆಯಲ್ಲಿ ವಿಶೇಷವಾದ ಅಡುಗೆಗಳನ್ನು ಮಾಡುತ್ತಾರೆ. ಮತ್ತು ತಿಂಡಿತಿನಿಸುಗಳನ್ನು ಮಾಡು ತ್ತಾರೆ. ಆದರೆ ಯುಗಾದಿ ಹಬ್ಬಕ್ಕೆ ಹಲವಾರು ತಿಂಡಿ-ತಿನಿಸುಗಳು ಮತ್ತು ರುಚಿಕರವಾದ ಅಡುಗೆಗಳನ್ನು ಪ್ರತಿಯೊಬ್ಬರೂ ಮನೆಯಲ್ಲಿ ಮಾಡುತ್ತಾರೆ ಆದರೆ ಯುಗಾದಿ ಹಬ್ಬದ ಪ್ರಯುಕ್ತ ನಿಮ್ಮ ಮನೆಯಲ್ಲಿ ದೇವರಿಗೆ ನೈವೇದ್ಯವಾಗಿ ಬೇವಿನ ಜೊತೆ ಬೆಲ್ಲದ ಜೊತೆ ನೈವಿದ್ಯ ವಾಗಿ ಬಾಳೆಹಣ್ಣಿನ ರಸಾಯನ ಮಾಡಿದರೆ ತುಂಬಾ ಒಳ್ಳೆಯದು. ಇದು ಹೇಗೆ ಮಾಡುವುದು ಎಂದರೆ ಮೊದಲಿಗೆ ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಯಾವುದೆಂದರೆ ಒಂದು ಚಮಚ ದ್ರಾಕ್ಷಿ 3 ಏಲಕ್ಕಿ 5 ಎಲಕ್ಕಿ ಬಾಳೆ ಹಣ್ಣು ಹಾಗೂ ಮೂರು ಚಮಚ ಗೋಡಂಬಿ ಎರಡು ಚಮಚ ಜೇನುತುಪ್ಪ ಹಾಗೂ ನಾಲ್ಕು ಚಮಚ ತೆಂಗಿನ ಕಾಯಿ ತುರಿ ಎರಡು ಚಮಚ ತುಪ್ಪ ಈ ಸಾಮಗ್ರಿಗಳು ಬೇಕಾಗುತ್ತದೆ.
ನಂತರ ಬಾಳೆಹಣ್ಣಿನ ರಸಾಯನ ಮಾಡುವುದು ವಿಧಾನ ಹೇಗೆ ಎಂದರೆ ಮೊದಲಿಗೆ ಬಾಳೆಹಣ್ಣನ್ನು ಕಟ್ ಮಾಡಿಕೊಳ್ಳಬೇಕು. ನಂತರ ಅದಕ್ಕೆ ದ್ರಾಕ್ಷಿ ಗೋಡಂಬಿ ಹಾಕಬೇಕು ಹಾಗೂ ಏಲಕ್ಕಿ ಪುಡಿ ಮಾಡಿಕೊಂಡು ಹಾಕಬೇಕು ನಂತರ ತೆಂಗಿನಕಾಯಿ ತುರಿ ಹಾಕಬೇಕು ಹಾಗೂ ಜೇನುತುಪ್ಪವನ್ನು ಹಾಕಿ ಮತ್ತು ತುಪ್ಪವನ್ನು ಹಾಕಬೇಕು. ಕೊನೆಯಲ್ಲಿ ನಿಮಗೆ ಸಿಹಿ ಬೇಕಾದಷ್ಟು ಬೆಲ್ಲವನ್ನು ಹಾಕಿಕೊಳ್ಳಬೇಕು ನಂತರ ಎಲ್ಲವನ್ನೂ ಮಿಕ್ಸ್ ಮಾಡಿ ಬಾಳೆಹಣ್ಣಿನ ರಸಾಯನ ರೆಡಿಯಾಗುತ್ತದೆ. ನಂತರ ಇದನ್ನು ಒಂದು ಚಿಕ್ಕ ಬಟ್ಟಲಿಗೆ ಹಾಕಿಕೊಳ್ಳಬೇಕು ನಿಂತರ ಬೇವು-ಬೆಲ್ಲ ಜೊತೆ ನಿಮ್ಮ ಮನೆಯಲ್ಲಿ ಯುಗಾದಿ ಹಬ್ಬದಂದು ದೇವರ ಮನೆಯಲ್ಲಿ ನೈವೇದ್ಯವಾಗಿ ಇಟ್ಟರೆ ನಿಮಗೆಲ್ಲ ಒಳ್ಳೆಯದು ಆಗುತ್ತದೆ ಸುಲಭ ವಿಧಾನದಲ್ಲಿ ಬಾಳೆಹಣ್ಣಿನ ರಸಾಯನ ಮಾಡಬಹುದು ಇದರ ಬಗ್ಗೆ ಕಮೆಂಟ್ ಮಾಡಿ.
