Fri. Mar 1st, 2024

ಪ್ರತಿಯೊಬ್ಬರ ಶರೀರದಲ್ಲಿ ಉಷ್ಣತೆ ಅನ್ನೋದು ಇರುತ್ತದೆ ಆದರೆ ಅದು ಅತಿಯಾದಾಗ ನಮ್ಮ ದೇಹದಲ್ಲಿ ತೊಂದರೆ ಉಂಟಾಗುತ್ತದೆ ಅದರಲ್ಲೂ ಬೇಸಿಗೆಕಾಲ ಬಂತು ಎಂದರೆ ಶರೀರದಲ್ಲಿ ಉಷ್ಣತೆ ಜಾಸ್ತಿಯಾಗುತ್ತದೆ ಆದ್ದರಿಂದ ನಾವು ನಮ್ಮ ಶರೀರದಲ್ಲಿ ಉಷ್ಣತೆಯನ್ನು ಕಡಿಮೆ ಮಾಡಿ ಕೊಳ್ಳಬೇಕಾದರೆ ಯಾವ ಡ್ರಿಂಕ್ ಅನ್ನು ಕುಡಿಯಬೇಕು ಮತ್ತು ಅದನ್ನು ಹೇಗೆ ನಮ್ಮ ಮನೆಯಲ್ಲೇ ತಯಾರಿಸಿಕೊಳ್ಳುವುದು ಎಂದು ನೋಡೋ ಣ ಬನ್ನಿ. ನಮ್ಮ ದೇಹದಲ್ಲಿ ಉಷ್ಣತೆ ಯಾವ ಕಾರಣದಿಂದ ಹೆಚ್ಚಾ ಗುತ್ತದೆ ಎಂದರೆ ಹೆಚ್ಚಾಗಿ ನೀರು ಕುಡಿಯದೆ ಇರುವುದರಿಂದ ಮತ್ತು ಜಂಕ್ ಫುಡ್ ತಿನ್ನುವುದರಿಂದ ಮತ್ತು ಕುರ್ಚಿಯಲ್ಲಿ ಕುಳಿತುಕೊಂಡು ಕೆಲಸಮಾಡುವುದರಿಂದ ಈ ಉಷ್ಣತೆ ಅನ್ನೋದು ಹೆಚ್ಚಾಗುತ್ತದೆ. ನಮ್ಮ ಶರೀರದಲ್ಲಿ ಉಷ್ಣತೆ ಹೆಚ್ಚಾದಂತೆ ಬಾಯಲ್ಲಿ ಹುಣ್ಣು ಆಗುವುದು ಮುಖದಲ್ಲಿ ಮೊಡವೆ ಆಗುವುದು ಮುಖದಲ್ಲಿ ಕಾಂತಿ ಕಳೆದುಕೊ ಳ್ಳುವುದು ಈ ರೀತಿ ತುಂಬಾ ಸಮಸ್ಯೆಗಳು ಆಗುತ್ತದೆ ನಾವು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದರೆ ನಾವು ಮನೆಯಲ್ಲಿ ಈ ರೀತಿ ಯಾದ ಜ್ಯೂಸನ್ನು ತಯಾರಿಸಿಕೊಂಡು ಕಡಿಮೆಮಾಡಬಹುದು. ಮೂತ್ರ ವಿಸರ್ಜನೆ ಸಮಯದಲ್ಲಿ ಹೆಚ್ಚಾಗಿ ಉರಿ ಬರುವುದು.

ನಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ಡ್ರಿಂಕ್ ಅನ್ನು ನಾವು ತಯಾರಿಸಬಹುದು. ಒಂದು ಪಾತ್ರೆ ಯನ್ನು ತೆಗೆದುಕೊಳ್ಳಿ ಅದರಲ್ಲಿ ಒಂದು ಚಮಚ ಸಬ್ಜಾ ಬೀಜವನ್ನು ಹಾಕಿ ನಂತರ ಒಬ್ಬರಿಗೆ ಮಾಡಿದರೆ ಒಂದು ಲೋಟ ಇಬ್ಬರಿಗೆ ಮಾಡಿ ದರೆ ಎರಡು ಲೋಟ ನೀರನ್ನು ಹಾಕಿ ಕೊಳ್ಳಬೇಕು. ಇದು ಚೆನ್ನಾಗಿ ಅರ್ಧಗಂಟೆ ನೆನೆಯಬೇಕು ನಂತರ ಕೆಂಪು ಕಲ್ಲುಸಕ್ಕರೆ ಎನ್ನು ಹಾಕ ಬೇಕು. ಕೊನೆಯದಾಗಿ ಅರ್ಧ ನಿಂಬೆ ಹಣ್ಣನ್ನು ಹಾಕಬೇಕು ಈ ಸಬ್ಜಾ ಬೀಜವನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೂ ಸಹ ತುಂಬಾನೆ ಒಳ್ಳೆಯದು ಮತ್ತು ಇದನ್ನು ಉಪಯೋಗಿಸುವುದರಿಂದ ತೂಕ ಕೂಡ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ನಾವು ಕಾಮಕಸ್ತೂರಿ ಬೀಜ ವನ್ನು ಉಪಯೋಗಿಸಿದ್ದೇವೆ ಆಯುರ್ವೇದದಲ್ಲಿ ಇದನ್ನು ಅತ್ಯಂತ ಔಷಧಿ ಗುಣವುಳ್ಳ ಎಂದು ಕರೆಯುತ್ತಾರೆ. ಈ ರೀತಿ ತಯಾರಿಸಿಕೊಂಡ ಪಾನಿಯವನ್ನು ನೀವು ಯಾವ ಕ್ಷಣದಲ್ಲಾದರೂ ಕುಡಿಯಬಹುದು.