Thu. Jun 30th, 2022

ಅರಳಿ ಎಲೆಯ ಮೇಲೆ ದೀಪವನ್ನು ಹೇಗೆ ಬೆಳಗಿಸುವುದು ಅರಳಿ ಎಲೆಯಿಂದ ದೀಪವನ್ನು ಬೆಳಗಿಸಿದರೆ ಏನೆಲ್ಲಾ ಪ್ರಯೋಜನಗಳು ದೊರೆಯುತ್ತದೆ ಗೊತ್ತ… ಮೊದಲಿಗೆ ಒಂದು ತಾಮ್ರದ ತಟ್ಟೆಯನ್ನು ತೆಗೆದುಕೊಂಡು ಅದನ್ನು ಶುಚಿಯಾಗಿ ತೊಳೆದುಕೊಂಡು ಒಂದು ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳಬೇಕು. ನಂತರ ಆ ತಟ್ಟೆಗೆ ಐದು ಭಾಗದಲ್ಲಿ ಅರಿಶಿನ ಮತ್ತು ಕುಂಕುಮವನ್ನು ಇಡಬೇಕು ಇದೇ ರೀತಿಯಲ್ಲಿ ಒಂದು ಅರಳಿ ಎಲೆಯನ್ನು ತೆಗೆದುಕೊಂಡು ಅದನ್ನು ಕೂಡ ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು ಆ ಎಲೆಯ ಐದು ಭಾಗದಲ್ಲಿ ಅರಿಶಿನ ಕುಂಕುಮವನ್ನು ಇಟ್ಟು ಆ ಎಲೆಯನ್ನು ತಟ್ಟೆಯ ಒಳಗೆ ಇಡಬೇಕು. ನಂತರ ಎರಡು ಮಣ್ಣಿನ ದೀಪಗಳನ್ನು ತೆಗೆದುಕೊಳ್ಳಬೇಕು ಈ ದೀಪಗಳನ್ನು ಕೂಡ ನೀರಿನಲ್ಲಿ ಶುಚಿಯಾಗಿ ತೊಳೆದು ಕೊಂಡು ಒಂದು ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳಿ. ಈ ದೀಪಕ್ಕೆ ಮೂರು ಭಾಗದಲ್ಲಿ ಅರಿಶಿಣ ಕುಂಕುಮವನ್ನು ಇಡಬೇಕು.


ಒಂದು ವಿಚಾರ ನೆನಪಿನಲ್ಲಿ ಇಟ್ಟುಕೊಳ್ಳಬೇಕು ದೇವರಿಗೆ ಆಗಲಿ ಅಥವಾ ನೀವೇ ಆಗಲಿ ಅರಿಶಿಣ ಮತ್ತು ಕುಂಕುಮವನ್ನು ಧರಿಸಬೇಕಾದರೆ.ಉಂಗುರದ ಬೆರಳಿನಿಂದ ಅದನ್ನು ಹಚ್ಚಿಕೊಳ್ಳಬೇಕು. ನಂತರ ಈ ದೀಪಗಳನ್ನು ಒಂದರ ಮೇಲೆ ಒಂದರಂತೆ ಅರಳಿ ಎಲೆಯ ಮೇಲೆ ಇಡಬೇಕು. ನಂತರ ಈ ದೀಪಕ್ಕೆ ಎರಡು ಜೋಡಿ ಬತ್ತಿಯನ್ನು ಇಡಬೇಕು ತದನಂತರ ದೀಪದ ಮುಕ್ಕಾಲು ಭಾಗದಷ್ಟು ಜಾಗಕ್ಕೆ ತುಪ್ಪವನ್ನು ಹಾಕಬೇಕು. ನಂತರ ಈ ಒಂದು ದೀಪವನ್ನು ಬೆಳಗಿಸಬೇಕು ದೀಪ ಬೆಳಗಿಸ ಬೇಕಾದರೆ ನೀವು ನೇರವಾಗಿ ಕಡ್ಡಿ ಪಟ್ಟಿಯಿಂದ ಬೆಳೆಗಿಸಬಾರದು ಕರ್ಪೂರ ಅಥವಾ ಗಂಧದ ಕಡ್ಡಿಯ ಮೂಲಕ ಈ ಒಂದು ದೀಪರಾಧನೆಯನ್ನು ಮಾಡಿ. ನಂತರ ಇದಕ್ಕೆ ಸ್ವಲ್ಪ ಅಕ್ಷತೆ ಮತ್ತು ಹೂವಿನಿಂದ ಅಲಂಕಾರ ಮಾಡಿ ಈ ಒಂದು ದೀಪವನ್ನು ದೇವರ ಕೋಣೆಯಲ್ಲಿ ಇಡಬೇಕು. ಈ ರೀತಿ ದೀಪರಾಧನೆಯನ್ನು ಪ್ರತಿ ಶನಿವಾರ ನಿಮ್ಮ ಮನೆಯಲ್ಲಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಕಲ ತೊಂದರೆಗಳು ನಿವಾರಣೆಯಾಗುತ್ತದೆ.