ಸಿಂಕ್, ಟ್ಯಾಪ್, ಫ್ಲೋರ್, ಟೈಲ್ಸ್ ನಲ್ಲಿ ಇರುವ ಉಪ್ಪು ನೀರಿನ ಕಲೆಗಳನ್ನು ಹೇಗೆ ಸ್ವಚಗೊಳಿಸಬಹುದು ಅಥವಾ ಕಲೆಗಳನ್ನು ತೆಗೆದು ಹಾಕಬಹುದಾದ ವಿಧಾನ…
ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕಂಡು ಬರುವಂತಹ ಸಿಂಕ್ ಆಗಿರಬಹುದು ಅಥವಾ ನಲ್ಲಿಗಳ ಮೇಲೆ ಹಲವಾರು ರೀತಿಯಾದಂತಹ ಉಪ್ಪಿನ ಕರೆಗಳು ಇರುತ್ತದೆ. ಅಷ್ಟೇ ಅಲ್ಲದೆ ನಾವು ಅಡುಗೆ ಮನೆಗೆ ಹಾಕಿರುವಂತಹ ಮಾರ್ಬಲ್ ಅಥವಾ ಇನ್ನಿತರ ಪದಾರ್ಥಗಳ ಮೇಲೆ ನೀರಿನ ಅಂಶಗಳು ಹೆಚ್ಚಾಗಿ ಬಿದ್ದಲ್ಲಿ ನೀರಿನಲ್ಲಿ ಇರುವಂತಹ ಉಪ್ಪಿನಂಶ ಈ ವಸ್ತುಗಳ ಮೇಲೆ ಕುಳಿತುಕೊಳ್ಳುತ್ತದೆ. ಇದನ್ನು ನಾವು ಕ್ರಮೇಣವಾಗಿ ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿದ್ದರೆ ಅಷ್ಟಾಗಿ ಕಲೆಗಳು ಹೆಚ್ಚಾಗಿ ಇದರ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ನಾವು ಇದನ್ನು ತಿಂಗಳುಗಳ ಗಟ್ಟಲೆ ಹಾಗೆಯೇ ಬಿಟ್ಟರೆ ಹೆಚ್ಚಾಗಿ ಕಲೆಗಳು ಕುಳಿತುಕೊಳ್ಳುತ್ತದೆ ಇದು ನೋಡುವುದಕ್ಕೆ ಅಸಯ್ಯವಾಗಿ ಕಾಣುತ್ತದೆ. ಹಾಗಾಗಿ ಕಲೆಗಳು ಕಟ್ಟಿಕೊಂಡಿರುವ ವಸ್ತುಗಳನ್ನು ಹೇಗೆ ಶುದ್ಧಗೊಳಿಸಬಹುದು ಎಂಬುದನ್ನು ಇಂದು ನಿಮಗೆ ತಿಳಿಸುತ್ತೇವೆ.
ಈ ಒಂದು ವಿಧಾನವನ್ನು ಅನುಸರಣೆ ಮಾಡುವುದಕ್ಕೆ ನಿಮಗೆ ಕೇವಲ ಎರಡು ಪದಾರ್ಥಗಳು ಇದ್ದರೆ ಸಾಕು ನಾವು ಪ್ರತಿನಿತ್ಯ ಹಲ್ಲುಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸುವಂತಹ ಟೂತ್ ಪೇಸ್ಟ್ ಹಾಗೂ ನಮ್ಮ ಸುತ್ತ ಮುತ್ತ ದೊರೆಯುವಂತಹ ಮಣ್ಣು ಈ ಪದಾರ್ಥಗಳನ್ನು ಉಪಯೋಗಿಸಿಕೊಂಡು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಮೊದಲಿಗೆ ಅಡುಗೆ ಮನೆಯಲ್ಲಿ ಇರುವಂತಹ ಸಿಂಕ್, ನಲ್ಲಿ ಮತ್ತು ಟೈಲ್ಸ್ ಇವುಗಳಿಗೆ ಟೂತ್ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಒಮ್ಮೆ ಬ್ರಶ್ ಮಾಡಬೇಕು. ನಂತರ ಇದನ್ನು ಹದಿನೈದು ನಿಮಿಷಗಳ ಕಾಲ ಹಾಗೆಯೇ ನೆನೆಯಲು ಬಿಡಬೇಕು ಕೊನೆಯದಾಗಿ ಇದರ ಮೇಲೆ ಸ್ವಲ್ಪ ತರಿಯಾಗಿ ಇರುವ ಮಣ್ಣನ್ನು ಹಾಕಿ ಬ್ರಶ್ ನಾ ಸಹಾಯದಿಂದ ತೊಳೆಯಬೇಕು ಹೀಗೆ ಮಾಡಿದ ಕೆಲವೇ ಕ್ಷಣಗಳಲ್ಲಿ ಅದೆಷ್ಟೇ ಕಲೆಗಳು ಇದ್ದರೂ ಕೂಡ ಅದು ಹೊರಟು ಹೋಗುತ್ತದೆ.