Sat. Jun 25th, 2022

ಕಟ್ಟಿದ ಮೂಗಿಗೆ ತಕ್ಷಣವೇ ಪರಿಹಾರ…

ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲ ಬಂದರೆ ಸಾಕು ವಾತಾವರಣದ ಬದಲಾವಣೆಯಿಂದಾಗಿ ನಮಗೂ ಕೂಡ ಈ ಒಂದು ಪರಿಣಾಮ ಬೀರುತ್ತದೆ. ಹಾಗಾಗಿ ನೆಗಡಿ, ಶೀತ, ಕೆಮ್ಮು ಇಂತಹ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಅದರಲ್ಲೂ ಮೂಗು ಕಟ್ಟಿಕೊಂಡರೆ ಉಸಿರಾಡಲು ತುಂಬಾನೇ ಕಷ್ಟ ಪಡಬೇಕಾಗುತ್ತದೆ. ಕೆಲವೊಮ್ಮೆ ಈ ಮೂಗು ಕಟ್ಟಿಕೊಂಡರೆ ವಾರಗಳಾದರೂ ಕೂಡ ಬಿಡುವುದಿಲ್ಲ. ಹಾಗಾಗಿ ಇಂದು ಕಟ್ಟಿದ ಮೂಗಿಗೆ ಉಪಶಮನ ದೊರೆಯುವಂತಹ ಅದ್ಭುತವಾದ ಮನೆಮದ್ದನ್ನು ತಿಳಿಸುತ್ತೇವೆ ಈ ಒಂದು ಮನೆಮದ್ದನ್ನು ಪ್ರತಿನಿತ್ಯ ಸೇವಿಸುವುದರಿಂದ ಮೂಗು ಕಟ್ಟಿಕೊಳ್ಳುವುದಿಲ್ಲ. ಮುಖ್ಯವಾಗಿ ಶೀತ ನೆಗಡಿ ಇರುವಂತಹ ವ್ಯಕ್ತಿಗಳು ಪ್ರತಿ ಬಾರಿಯೂ ಕೂಡ ನೀವು ಉಗುರು ಬೆಚ್ಚಗಿನ ನೀರನ್ನು ಮಾತ್ರ ಕುಡಿಯಬೇಕಾಗುತ್ತದೆ ತಣ್ಣಿರನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ.

ಇನ್ನೂ ಈ ಒಂದು ನೆಗಡಿಯನ್ನು ನಿವಾರಣೆ ಮಾಡುವ ಮನೆಮದ್ದು ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಒಂದು ಗ್ಲಾಸ್ ಗೆ ಒಂದು ಇಂಚು ಶುಂಠಿಯನ್ನು ಚೆನ್ನಾಗಿ ಜಜ್ಜಿ ಹಾಕಿ ನಂತರ ಕಾಲು ಟೇಬಲ್ ಸ್ಪೂನ್ ಮೆಣಸಿನ ಪುಡಿಯನ್ನು ಹಾಕಿ ಕಾಲು ಟೇಬಲ್ ಸ್ಪೂನ್ ಅರಿಶಿಣದ ಪುಡಿ ಹಾಗೂ ಒಂದು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ನಂತರ ಚೆನ್ನಾಗಿ ಕುದಿಯುತ್ತಿರುವ ನೀರನ್ನು ಹಾಕಿ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ಮಿಕ್ಸ್ ಮಾಡಬೇಕು. ಈ ಒಂದು ಮಿಶ್ರಣವನ್ನು ಒಂದು ತಟ್ಟೆ ಮುಚ್ಚಿ 5 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಇದನ್ನು ಸೇವಿಸಬೇಕು ಪ್ರತಿನಿತ್ಯ ದಿನಕ್ಕೆ ಮೂರು ಬಾರಿ ಈ ಒಂದು ಮಿಶ್ರಣವನ್ನು ಸೇವಿಸುವುದರಿಂದ ನಿಮಗೆ ಇರುವಂತಹ ಶೀತ, ನೆಗಡಿ ಅದರಲ್ಲೂ ಮೂಗು ಕಟ್ಟಿಕೊಂಡಿದ್ದರೆ ಅದು ಉಪಶಮನವಾಗುತ್ತದೆ.