Thu. Jun 30th, 2022

ಪ್ರತಿಯೊಬ್ಬರ ಮನೆಯಲ್ಲಿ ಹಲವಾರು ವಸ್ತುಗಳು ಇದ್ದೇ ಇರುತ್ತವೆ. ಅದೇ ರೀತಿ ಮನೆಯಲ್ಲಿ ಸೊಳ್ಳೆ ಕಾಟ ಇದ್ದೇ ಇರುತ್ತದೆ ಸುಮಾರು ಮನೆಗಳಲ್ಲಿ ತುಂಬಾ ಸೊಳ್ಳೆಕಾಟ ಇರುತ್ತದೆ. ಅದರಿಂದ ಜನರ ತುಂಬಾ ಸಮಸ್ಯೆ ಆಗುತ್ತದೆ ಅದರ ಕಡಿತದಿಂದ ಹಲವಾರು ರೋಗಗಳು ಬರುತ್ತದೆ ಹಾಗೂ ನಿದ್ದೆ ಮಾಡಲು ಆಗುವುದಿಲ್ಲ. ಮಾರಣಾಂತಿಕ ಕಾಯಿಲೆ ಜೊತೆ ನಿದ್ರೆಗೆ ಸಮಸ್ಯೆ ಉಂಟುಮಾಡುತ್ತದೆ ಸೊಳ್ಳೆಗಳ ಕಾಟವನ್ನು ನಿವಾರಣೆ ಮಾಡಲು ಸಿಂಪಲ್ಲಾದ ಟಿಪ್ಸ್ಗಳು ಇದೆ. ಇದನ್ನು ಫಾಲೋ ಮಾಡಿಕೊಂಡು ಬಂದರೆ ಮನೆಯಲ್ಲಿ ಸೊಳ್ಳೆಗಳ ನಿವಾರಣೆ ಕಡಿಮೆ ಮಾಡಬಹುದು.ಮಳೆಗಾಲ ಬಂದಮೇಲೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ರಾತ್ರಿ ಆಗುತ್ತಿದ್ದಾಗ ಲೆ ಸೊಳ್ಳೆಗಳು ಮನೆ ಒಳಗಡೆ ಬರುತ್ತದೆ ಇದರಿಂದ ತಪ್ಪಿಸಿಕೊಳ್ಳಲು ಮನೆ ಒಳಗಡೆ ಗುಡ್ ನೈಟ್ ಇಟ್ಟರು ಸೊಳ್ಳೆಗಳ ಕಾಟ ತಪ್ಪುವುದಿಲ್ಲ ಆದರೆ ಗುಡ್ ನೈಟ್ ಇದರಿಂದ ಉಸಿರು ಕಟ್ಟುವುದು ಮತ್ತು ತಲೆನೋವು ಬರುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಬೇರೆ ಸಿಂಪಲ್ ಟಿಪ್ಸ್ ಬಳಸಿ ಸೊಳ್ಳೆಗಳ ನಿವಾರಣೆ ಮಾಡಬಹುದು


ಮೊದಲಿಗೆ ನಿಂತಿರುವ ನೀರಿನ ಜಾಗದಲ್ಲಿ ಕಾಫಿ ಬೀಜವನ್ನು ಹಾಕಿದರೆ ಸೊಳ್ಳೆಗಳು ಬರುವುದಿಲ್ಲ ಮತ್ತು ಅಲ್ಲಿ ಮೊಟ್ಟೆ ಕೂಡ ಹಾಕುವುದಿಲ್ಲ ಇದರಿಂದ ಆಕ್ಸಿಜನ್ ಕೊರತೆ ಉಂಟಾಗಿ ಸೊಳ್ಳೆಗಳು ಮೊಟ್ಟೆ ಕೂಡ ಹಾಕುವುದಿಲ್ಲ ಇನ್ನು ಎರಡನೇ ಮನೆಮದ್ದು ಅದು ನಿಂಬೆಹಣ್ಣಿನ ಜೊತೆ ಲವಂಗವನ್ನು ಬೆರೆಸಿ ಅರ್ಧಭಾಗವನ್ನು ಮಾಡಿ ಮನೆಯಲ್ಲಿ ಇಟ್ಟರೆ ಅದರ ವಾಸನೆಗೆ ಸೊಳ್ಳೆ ಬರುವುದಿಲ್ಲ. ಇನ್ನು ಮೂರನೇ ಮನೆಮದ್ದು ಬೆಳ್ಳುಳ್ಳಿಯನ್ನು ಜಜ್ಜಿ ನೀರಿನ ಒಳಗಡೆ ಹಾಕಿ ಮನೆಗೆ ಸ್ಪ್ರೇ ಮಾಡಿದರೆ ಮನೆ ಒಳಗೆ ಸೊಳ್ಳೆ ಬರುವುದಿಲ್ಲ .ಇನ್ನು ಪುದಿನ ಸೊಪ್ಪು ರಸವನ್ನು ಮನೆಯ ಪೂರ್ತಿ ಸ್ಪ್ರೇ ಮಾಡಿದರೆ ಸೊಳ್ಳೆಗಳು ಮನೆ ಒಳಗಡೆ ಬರುವುದಿಲ್ಲ ಈ ರೀತಿ ಮಾಡುವುದರಿಂದ ಮನೆ ಒಳಗಡೆ ಸೊಳ್ಳೆ ಬರುವುದಿಲ್ಲ. ಈ ವಿಧಾನದಿಂದ ಸುಲಭವಾಗಿ ಸೊಳ್ಳೆಗಳನ್ನು ನಿವಾರಣೆ ಮಾಡಬಹುದು ಇದನ್ನು ಒಮ್ಮೆ ಪ್ರಯತ್ನ ಮಾಡಿ ಉತ್ತಮ ಫಲಿತಾಂಶ ಸಿಗುತ್ತದೆ.