ಸ್ವಂತ ಮನೆಯಲ್ಲಾಗಲಿ ಅಥವಾ ಬಾಡಿಗೆ ಮನೆಯಲ್ಲಾಗಲಿ ಗೃಹಪ್ರವೇಶ ವನ್ನು ಮಾಡುವವರು 5 ವಿಷಯಗಳನ್ನು ಗಮನದಲ್ಲಿಟ್ಟು ಕೊಂಡು ಮಾಡಬೇಕು. ಅದೇನೆಂದರೆ ಹೊಸ ಮನೆಯನ್ನು ಗೃಹಪ್ರವೇಶಕ್ಕೆ ಹೋ ಗುವರು ಮನೆಯ ಯಜಮಾನ ಯಜಮಾನ ಅಥವಾ ಮಗನ ಜಾತಕ ವನ್ನು ತೋರಿಸಿ ಅಲ್ಲಿ ದಿನಾಂಕವನ್ನು ಗುರುತು ಮಾಡಿಕೊಳ್ಳುತ್ತಾರೆ. ಬಾಡಿಗೆ ಮನೆಯಲ್ಲಿ ಇರುವವರು ಅಡುಗೆಮನೆಯಲ್ಲಿ ಹಾಲನ್ನು ಕಾಯಿ ಸಿ ಮನೆಗೆ ಹೋಗುತ್ತಾರೆ ಆದರೆ ಸ್ವಂತ ಮನೆಯವರು ಮೊದಲಿಗೆ ಗೃಹಪ್ರವೇಶ ವನ್ನು ಮಾಡಬೇಕು ಎಂದರೆ ಹಸುವನ್ನು ಮನೆ ಒಳಗಡೆ ನುಗ್ಗಿಸಿ ಆನಂತರ ಮಂಗಳಕಾರ್ಯ ವಸ್ತುಗಳನ್ನು ಒಳಗಡೆ ತೆಗೆದು ಕೊಂಡು ಹೋಗುತ್ತಾರೆ. ಮತ್ತೆ ಹೋಮ ಮಾಡ್ತಿ ಪೂಜೆ ಮಾಡಿಸಿ ಹಾಲನ್ನು ಕಾಯಿಸುತ್ತಾರೆ. ಹಾಲನ್ನು ಕಾಯಿಸುವುದಕ್ಕೆ ಮತ್ತು ಗೋವ ನ್ನು ಒಳಗಡೆ ಮುಗಿಸುವುದಕ್ಕೆ ಬ್ರಹ್ಮ ಮುಹುರ್ತ ಬಿಟ್ಟರೆ ಇನ್ಯಾವ ಸಮಯ ಇರುವುದಿಲ್ಲ. ಇನ್ನು ನಿಮ್ಮ ನೆಂಟರನ್ನು ಮತ್ತೆ ನಿಮಗೆ ಬೇಕಾಗಿರುವ ಅವರನ್ನು ಕರೆದು ಅರಿಶಿನ ಕುಂಕುಮ ಕೊಟ್ಟು ಊಟ ಹಾಕುವುದನ್ನು ಬೇರೆ ಮುಹೂರ್ತವನ್ನು ನಿಗದಿ ಮಾಡಿಕೊಳ್ಳಿ.
ನೀವು ಗೃಹಪ್ರವೇಶ ವನ್ನು ಮಾಡಬೇಕು ಎಂದು ಮನೆಗೆ ಹೋಗುವಾಗ ವಾರಗಳಲ್ಲಿ ಹೋದರೆ ತುಂಬಾ ಒಳ್ಳೆಯದು ಸೋಮವಾರ ಬುಧವಾರ ಗುರುವಾರ ಶುಕ್ರವಾರ ಮತ್ತು ಭಾನುವಾರ. ಇನ್ನು ಬ್ರಹ್ಮ ಮುಹೂರ್ತ ಬೆಳಗ್ಗೆ 4:30ರಿಂದ 5:45 ರ ಒಳಗೆ ಹಾಲನ್ನು ಕಾಯಿಸಿ ಪೂಜೆ ಮಾ ಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಅದಕ್ಕಿಂತಲೂ ಮುಂಚೆ ಮಂಗಳಕರವಾದ ಹಸುವನ್ನು ಒಳಗಡೆ ನುಗ್ಗಿಸಿ ಪ್ರವೇಶ ಮಾಡುವುದು ತುಂಬಾ ಒಳ್ಳೆಯದು. ಮನೆ ಒಳಗಡೆ ಬರುವಾಗ ಮೊದಲು ಆ ಮ ನೆಯ ಯಜಮಾನಿ ತುಂಬಿದ ಕೊಡ ದಲ್ಲಿ ನೀರನ್ನು ತೆಗೆದುಕೊಂಡು ಬಲಗಾಲಿಟ್ಟು ಒಳಗಡೆ ಬರುವಾಗ ಲಕ್ಷ್ಮಿಯನ್ನು ನೆನೆಯುತ್ತ ಮನೆಯಲ್ಲಿ ಎಲ್ಲರಿಗೂ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕರುಣಿಸು ನಿರಂತ ರವಾಗಿ ನೆಲೆಸೆಂದು ಬೇಡಿಕೊಳ್ಳಬೇಕು. ಆನಂತರ ಅರಿಶಿನದ ಕೊಂಬು ಅಥವಾ ಪುಡಿಯನ್ನು ಒಳಗಡೆ ತರಬೇಕು. ನಂತರ ಕಲ್ಲುಪ್ಪು ಅಥವಾ ಪುಡಿ ಉಪ್ಪು ಮತ್ತು ಅಕ್ಕಿ. ನಂತರ ತೊಗರಿ ಬೇಳೆ ಹೆಸರುಬೇಳೆ ಕಡ್ಲೆಬೇಳೆ ಯಾವುದಾದರೂ ಒಂದು ಬೇಳೆಯನ್ನು ತರಬೇಕು. ಮತ್ತು ಬೆಲ್ಲವನ್ನು ತರಬೇಕು. ನಂತರ ಗಣಪತಿ ಹೋಮ ಮಾಡಿಸುವುದು ತುಂಬಾ ಒಳ್ಳೆಯದು. ಬ್ರಹ್ಮ ಮುಹೂರ್ತದ ವೇಳೆ ಅಕ್ಕಿಹಿಟ್ಟಿನಿಂದ ರಂಗೋಲಿಯನ್ನು ಬಿಟ್ಟು ಅರಿಸಿನ ಕುಂಕುಮ ಹಚ್ಚಿ ಒಲೆಗೆ ಆಮೇಲೆ ಹಾಲನ್ನು ಕಾಯಿಸುವುದು ಒಳ್ಳೆಯದು.