Tue. Aug 9th, 2022

ಯಾವುದೇ ಹಣ್ಣಾ ಆಗಲಿ ತರಕಾರಿ ಆಗಲಿ ಅವುಗಳನ್ನು ಉಪಯೋಗಿಸಿಕೊಂಡು ಬೀಜವನ್ನು ಎಸೆಯುತ್ತೇವೆ ಆದರೆ ಬೀಜದಲ್ಲಿರುವ ಉಪಯೋಗ ಯಾರಿಗೂ ತಿಳಿದಿರುವುದಿಲ್ಲ ಆದರೆ ಅದರಲ್ಲಿ ಒಂದಾದ ಹುಣಿಸೆಹಣ್ಣನ್ನು ನಾವ್ ಉಪಯೋಗಿಸಿಕೊಂಡು ಹುಣಸೆ ಬೀಜ ವನ್ನು ಬಿಸಾಡುತ್ತೇವೆ ಆದರೆ ಹಳ್ಳಿ ಜನರಿಗೆ ಹುಣಸೆಬೀಜದ ರಹಸ್ಯ ಗೊತ್ತಿದೆ ಆದ್ದರಿಂದಲೇ ಹಲವು ಕಡೆ ಇದನ್ನು ಹುರಿದು ಸೇವಿಸುವ ಅಭ್ಯಾಸ ಇದೆ ಹುಣಸೆ ಬೀಜ ದಲ್ಲಿ ಮೆಗ್ನೀಷಿಯಂ ಕ್ಯಾಲ್ಸಿಯಂ ಪೊಟ್ಯಾಶಿಯಂ ಅಮಿನೋ ಆಮ್ಲ ವಿದೆ ಹುಣಸೆ ಬೀಜ ದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು ಆರೋಗ್ಯಕ್ಕೂ ಇದು ಪರಿಣಾಮಕಾರಿ ಬನ್ನಿ ಹಾಗಾದರೆ ಹುಣಸೆ ಬೀಜದ ಉಪಯೋಗ ವೇನು ತಿಳಿದುಕೊಳ್ಳೋಣ.ಸಂಧಿವಾತವನ್ನು ಹೋಗಲಾಡಿಸುತ್ತದೆ ಹುಣಸೆಬೀಜದ ಇರುವಂತಹ ಉರಿಯೂತ ಸಮನ ಕಾರಿ ಗುಣವು ಸಂಧಿವಾತ ವ್ಯಕ್ತಿಗಳಿಗೆ ಶಮನ ನೀಡುತ್ತದೆ ಅರ್ಧ ಚಮಚ ತುರಿದ ಹುಣಸೆ ಬೀಜದ ಪುಡಿಯನ್ನು ದಿನಕ್ಕೆರಡು ಸಲ ಸೇವಿಸುವುದರಿಂದ ನೀರಿನಲ್ಲಿ ಹಾಕಿ ಕುಡಿಯುವುದರಿಂದ ನೋವು ಶಮನವಾಗುತ್ತದೆ ಅತಿಸಾರ ನಿವಾರಣೆಯಾಗುತ್ತದೆ.

ಬೇದಿ ಹಾಗೂ ಅತಿಸಾರ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರು ಐದರಿಂದ ಆರು ಹುಣಸೆ ಬೀಜವನ್ನು ಹುರಿದು ಅದರ ಪುಡಿಯನ್ನು ಸೇವಿಸಿದರೆ ಅತಿಸಾರದ ಸಮಸ್ಯೆ ದೂರವಾಗುತ್ತದೆ.ಹಲ್ಲುಗಳಿಗೆ ಉತ್ತಮ ಹಲ್ಲುಗಳು ತುಂಬಾ ದುರ್ಬಲವಾಗಿದ್ದರೆ ಹುಣಸೆ ಬೀಜದ ಪುಡಿಯನ್ನು ಹಲ್ಲುಗಳಿಗೆ ಹಾಗೂ ವಸಡುಗಳಿಗೆ ಹಚ್ಚಿಕೊಳ್ಳಿ ಇದರಿಂದ ಒಂದು ವಾರದಲ್ಲಿ ಒಂದು ದಿನ ಹಲ್ಲುಜ್ಜುವುದರಿಂದ ಹಲ್ಲುಗಳು ಬಲಶಾಲಿಯಾಗುತ್ತದೆ ಎಂತಹ ಸಮಸ್ಯೆಗಳು ಇದ್ದರೂ ಕೂಡ ಬೇಗನೆ ನಿವಾರಣೆಯಾಗುತ್ತದೆ ಅಜೀರ್ಣದ ಸಮಸ್ಯೆಗೆ ಉತ್ತಮ ಹುಣಸೆಬೀಜ ನೈಸರ್ಗಿಕವಾಗಿ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇದ್ದು ಹೆಚ್ಚಿನ ನಾರಿನಾಂಶವನ್ನು ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಮತ್ತು ನೈಸರ್ಗಿಕವಾಗಿ ಹಸಿವು ಉಂಟುಮಾಡುತ್ತದೆ ಮಲಬದ್ಧತೆ ನಿವಾರಣೆ ಮಾಡುತ್ತದೆ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹುಣಸೆ ಬೀಜ ದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣಗಳಿವೆ ಹಲವಾರು ರೀತಿಯ ರೋಗಗಳು ಮತ್ತು ಸಮಸ್ಯೆಗಳನ್ನು ಇದು ನಿವಾರಣೆ ಮಾಡುತ್ತದೆ.

ಆದ್ದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಐದರಿಂದ ಆರು ಹುಣಸೆ ಬೀಜ ವನ್ನು ಹುರಿದು ಪ್ರತಿದಿನ ಸೇವಿಸಿ ಕೆಮ್ಮು ಗಂಟಲು ನೋವಿನಿಂದ ರಕ್ಷಣೆ ಶೀತ ಕೆಮ್ಮು ಗಂಟಲು ನೋವಿನಿಂದ ಬಳಲುತ್ತಿದ್ದರೆ ಅಂತ ಸಮಸ್ಯೆಗೆ ಈ ಸಮಸ್ಯೆಯಿಂದ ಹೊರಗೆ ಬರಲು ಹುಣಸೆ ಬೀಜ ವನ್ನು ಬಳಕೆ ಮಾಡಬಹುದು ನಾಲ್ಕರಿಂದ ಐದು ಹುಣಸೆ ಬೀಜ ವನ್ನು ಕುಟ್ಟಿ ಪುಡಿ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಒಂದು ಚಿಕ್ಕ ತುಂಡು ಶುಂಠಿ ಮತ್ತು ಒಂದು ಚಿಕ್ಕ ತುಂಡು ದಾಲ್ಚಿನ್ನಿಯನ್ನು ಹಾಕಿ ಒಂದು ಲೋಟ ನೀರು ಹಾಕಿ ಇದನ್ನು ಕುದಿಸಿ ದಿನಕ್ಕೆರಡು ಬಾರಿ ಕುಡಿಯಿರಿ ಈ ರೀತಿ ಮಾಡುವುದರಿಂದ ಕೆಮ್ಮು ಶೀತ ಗಂಟಲು ನೋವಿನ ಸಮಸ್ಯೆಯಿಂದ ತಕ್ಷಣ ಗುಣವಾಗುತ್ತದೆ.