Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ .ಅದರಲ್ಲಿ ಸಾಕಷ್ಟು ಜನರಿಗೆ ಇತ್ತೀಚೆ ದಿನಗಳಲ್ಲಿ ಗಜಕರ್ಣ ಹುಳುಕಡ್ಡಿ ಮುಂತಾದ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಗಜಕರ್ಣ ಚರ್ಮವ್ಯಾಧಿ ಸಮಸ್ಯೆ ಆಗಿದೆ ಇದು ಫಂಗಲ್ ಇನ್ಸ್ಪೆಕ್ಷನ್ ಇಂದ ಬರುತ್ತದೆ. ಅಂದರೆ ಬ್ಯಾಕ್ಟೀರಿಯಾ ಗಳಿಂದ ಸಮಸ್ಯೆ ಬರುತ್ತದೆ ನಮ್ಮ ಚರ್ಮದಲ್ಲಿ ಸ್ವಚ್ಛತೆ ಕೊರತೆ ಉಂಟಾದಾಗ ಈ ರೀತಿ ಸಮಸ್ಯೆಗಳು ಬರುತ್ತದೆ ಕ್ರಿಮಿಗಳು ನಮ್ಮ ದೇಹದಲ್ಲಿ ಉಂಟಾದಾಗ ಈ ರೀತಿ ಸಮಸ್ಯೆಗಳು ಬರುತ್ತದೆ. ತೆಳುವಾದ ಬಟ್ಟೆಗಳನ್ನು ಮತ್ತು ಸ್ವಚ್ಛಗೊಳಿಸುವ ಬಟ್ಟೆಗಳನ್ನು ಧರಿಸಬೇಕು ಇದರಿಂದ ದೇಹಕ್ಕೆ ಒತ್ತಡ ಉಂಟಾಗುವುದಿಲ್ಲ. ಗಜಕರ್ಣ ಸಾಮಾನ್ಯವಾಗಿ ಸೊಂಟ ಭಾಗದಲ್ಲಿ ಆಗುತ್ತದೆ ಹಾಗೂ ನಮ್ಮ ದೇಹದಲ್ಲಿ ಉತ್ಪತ್ತಿಯಾದ ಬೆವರಿದಾಗ ಚರ್ಮದಲ್ಲಿ ಅದು ನಿಂತುಕೊಳ್ಳುತ್ತದೆ . ಆದ್ದರಿಂದ ಈ ಸಮಸ್ಯೆಗಳು ಉಂಟಾಗುತ್ತದೆ ಹಾಗೂ ತೊಡೆ ಭಾಗಗಳಲ್ಲಿ ಈ ರೀತಿ ಸಮಸ್ಯೆ ಉಂಟಾಗುತ್ತದೆ.

ಕುತ್ತಿಗೆ ಭಾಗದಲ್ಲಿ ಮತ್ತು ಕಂಕುಳಿನಲ್ಲಿ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತೆಳುವಾದ ಬಟ್ಟೆಯನ್ನು ಧರಿಸಬೇಕು ಮತ್ತು ಹೆಚ್ಚು ಉಷ್ಣಾಂಶ ಇರುವ ಪದಾರ್ಥವನ್ನು ತಿನ್ನಬಾರದು. ಸರಿಯಾದ ಆಹಾರವನ್ನು ಸೇವನೆ ಮಾಡಬೇಕು ಬೆವರುವ ಸತತವಾಗಿ ನಿಲ್ಲುವ ಸ್ಥಳಗಳಲ್ಲಿ ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದಕ್ಕೆ ಮನೆ ಮದ್ದು ಯಾವುದು ಎಂದರೆ ಬೇವಿನಸೊಪ್ಪನ್ನು ತೆಗೆದುಕೊಂಡು ಬಂದು ಚೆನ್ನಾಗಿ ಚಚ್ಚಿ ನಂತರ ಅದರ ಜೊತೆಗೆ ಸ್ವಲ್ಪ ಅರಿಶಿನ ಪುಡಿ ಬೆರೆಸಿ ಗಜಕರ್ಣ ಇರುವ ಸ್ಥಳಕ್ಕೆ ಹಾಕಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಬಳಸಬೇಕು ಆಗ ಈ ಸಮಸ್ಯೆ ನಿವಾರಣೆಯಾಗುತ್ತದೆ. ಮಂಜಿಷ್ಟ ಅದನ್ನ ತೆಗೆದುಕೊಂಡು ಕಲ್ಲಿನಲ್ಲಿ ತೇದು ಅದನ್ನ ಗಜಕರ್ಣ ಇರುವ ಭಾಗದಲ್ಲಿ ಹಾಕಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಇದು ತುಂಬಾ ಒಳ್ಳೆಯದು ಈ ರೀತಿ ಮಾಡಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.