Tue. Mar 19th, 2024

ಕನ್ನಡ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಅವರ ಬಗ್ಗೆ ತಿಳಿಯದ ಹಲವಾರು ಮಾಹಿತಿ ಅವರ ಆಪ್ತರಾದ ಸೋಮಣ್ಣ ಅವರು ತಿಳಿಸಿಕೊಡುತ್ತಾರೆ ಬನ್ನಿ. ಡಾಕ್ಟರ್ ರಾಜಕುಮಾರ್ ಅವರ ಪರಿಚಯ ನಮಗೆ ಹೇಗೆ ಆಯ್ತೆಂದರೆ ಸಂಪತ್ತಿಗೆ ಸವಾಲ್ ನಲ್ಲಿ ಡಾಕ್ಟರ್ ರಾಜಕುಮಾರ್ ಅವರ ಅಣ್ಣನ ಪಾತ್ರ ಮಾಡಿರುವ ರಾಜಶೇಖರ್ ಅವರಿಗೆ ನಮ್ಮ ಅಣ್ಣ ಸ್ನೇಹಿತರಾಗಿದ್ದರು ಅವರಿಂದ ನಮಗೆ ಅಣ್ಣವರ ಪರಿಚಯ ಆಯಿತು ನಾನು ಮೊದಲ ಬಾರಿಗೆ ಹುಲಿ ಹಾಲಿನ ಮೇವು ಚಿತ್ರದ ಶೂಟಿಂಗ್ ನಡೆಯುವಾಗ ರಾಜಕುಮಾರ್ ಅಣ್ಣನವರನ್ನು ಭೇಟಿ ಮಾಡಿದೆ ಅಲ್ಲಿಂದ ನನ್ನ ಅವರ ಸ್ನೇಹ ಶುರುವಾಯಿತು. ಅಲ್ಲಿಂದ ಸುರುವಾದ ಸ್ನೇಹ ಬಹಳ ಗಟ್ಟಿ ಆಯಿತು. ಈ ಕೆಳಗಿನ ವಿಡಿಯೋ ನೋಡಿ.

ರಾಜಕುಮಾರ್ ಅವರು ತುಂಬಾ ಸರಳ ಜೀವಿ ಎಲ್ಲರನ್ನು ಪ್ರೀತಿಯಿಂದ ಕಾಣುವವರು. ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ. ಅವರಲ್ಲಿ ಯಾವುದೇ ಬೇದ ಭಾವ ಮಾಡುವುದಿಲ್ಲ ಅವರ ಸರಳತೆಯ ವಿಚಾರ ಏನೆಂದರೆ ಬಡತನ ಸಿರಿತನ ಎಂಬ ಬೇಧ ಇಲ್ಲ ಮತ್ತು ಪರಿಚಯದ ನಂತರ ನನಗೆ ಸಿನಿಮಾಗಳಲ್ಲಿ ವಿಲನ್ ಪಾತ್ರಗಳು ದೊರೆತಿತು ಅವರ ಜೊತೆ ಮತ್ತು ಶಿವಣ್ಣ ಅವರ ಜೊತೆ ರಾಘಣ್ಣ ಅವರ ಜೊತೆ ಹೀಗೆ ಹಲವಾರು ಸಿನಿಮಾಗಳಲ್ಲಿ ನಾನು ಅವರ ಒಡನಾಟದಲ್ಲಿ ಸಿನಿಮಾ ರಂಗದಲ್ಲಿ ನಟಿಸಿದ್ದೇನೆ ನಾನು ಹತ್ತಿರದಿಂದ ಡಾಕ್ಟರ್ ರಾಜಕುಮಾರ್ ಅವರನ್ನು ನೋಡಿದ್ದೇನೆ ಅವರು ತುಂಬಾ ಸರಳ ಸಜ್ಜನಿಕೆ ಜೀವಿ ಮತ್ತು ಅವರು ಒಬ್ಬ ದೇವತಾ ಮನುಷ್ಯ ಎಂದರೆ ತಪ್ಪಾಗಲಾರದು. ಅವರ ಮನೆಗೆ ಯಾವುದೇ ವ್ಯಕ್ತಿ ಹೋದರು ಅವರು ತುಂಬಾ ಗೌರವದಿಂದ ನಡೆಸಿಕೊಳ್ಳುತ್ತಾರೆ ಮತ್ತು ಅವರ ಮನೆಯಲ್ಲಿ ಒಬ್ಬರಂತೆ ನೋಡುತ್ತಾರೆ. ಇದೇ ರೀತಿ ಹಲವಾರು ವಿಷಯಗಳಲ್ಲಿ ಡಾಕ್ಟರ್ ರಾಜಕುಮಾರ್ ಅವರು ದೊಡ್ಮನೆ ಅವರು ಎಂದು ಹೆಸರು ಹೇಳಿದರು ಎಂದಿಗೂ ದೊಡ್ಡ ಮನೆಯವರು ದೊಡ್ಡ ಮನೆಯವರೇ.