Tue. Aug 9th, 2022

ಮುಖದಲ್ಲಿ ಬರುವ ಸುಕ್ಕನ್ನು ಕಡಿಮೆ ಮಾಡುವುದು ಹೇಗೆ? ಮುಖದ ಮೇಲಿನ ಸುಕ್ಕು ಹೆಚ್ಚಾದರೆ ನಮ್ಮ ವಯಸ್ಸು ಹೆಚ್ಚಾದಂತೆ ಕಾಣಿಸುತ್ತದೆ. ನಮ್ಮ ಜೀವನ ಶೈಲಿಯಿಂದಾಗಿ ಮತ್ತು ನಮ್ಮ ಆಹಾರ ಪದ್ಧತಿಯಿಂದಾಗಿ 30ವರ್ಷದವರು 40 ವರ್ಷದ ಹಾಗೆ ಕಾಣುತ್ತಿದ್ದಾರೆ ಆದ್ದರಿಂದ ನಾವು ಯುವಕರಂತೆ,ಯುವತಿಯರಂತೆ ಕಾಣಬೇಕು ಅಂದರೆ ಹೆಚ್ಚು ನೀರು ಕುಡಿಯಬೇಕು ಚೆನ್ನಾಗಿ ಹಣ್ಣು, ತುಪ್ಪ ಎಲ್ಲವನ್ನು ಸೇವಿಸಬೇಕು ತುಪ್ಪ ಸೇವಿಸುವುದರಿಂದ ಒಳ್ಳೆಯ ಕೊಬ್ಬು ಹೆಚ್ಚುತ್ತದೆ ಒಳ್ಳೆಯ ಕೊಬ್ಬು ನಮ್ಮ ದೇಹಕ್ಕೆ ತುಂಬಾನೇ ಉಪಯೋಗಕಾರಿ ಮತ್ತು ವಿಟಮಿನ್-ಸಿ ಚರ್ಮದ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಮುಖದ ಮೇಲಿನ ಸೊಕ್ಕನ್ನು, ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಉಪಾಯಗಳನ್ನು ನಾವು ಈಗ ಹೇಳುತ್ತೇವೆ ನಾವು ಹೇಳುವ ಈ ಉಪಾಯವನ್ನು ನೀವು ಒಂದು ತಿಂಗಳು ಮಾಡಿದರೆ ಖಂಡಿತವಾಗಿಯೂ ಮುಖದ ಸುಕ್ಕು ಕಡಿಮೆಯಾಗುತ್ತದೆ.

ಮೊದಲಿಗೆ ಮುಖದ ಮೇಲೆ ಸುಕ್ಕು ಹೆಚ್ಚು ಇರುವವರು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಎಕ್ಸ್ಟ್ರಾ ವರ್ಜಿನ್ ಕೋಲ್ಡ್ ಪ್ರೆಸ್ಟ್ ಆಲಿವ್ ಆಯಿಲ್ ಎಣ್ಣೆಯನ್ನು ಪ್ರತಿನಿತ್ಯ ರಾತ್ರಿ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ ಮಲಗಿ ಇದನ್ನು ಒಂದು ತಿಂಗಳು ಮಾಡಿದರೆ ಮುಖದ ನೆರಿಗೆ ಕಡಿಮೆಯಾಗುತ್ತದೆ ಆದ್ದರಿಂದ ಇದು ಸುಲಭವಾದ ಕಡಿಮೆ ಖರ್ಚಿನ ಪರಿಣಾಮಕಾರಿಯಾದ ವಿಧಾನ. ಸೊಕ್ಕನ್ನು ಕಡಿಮೆಮಾಡಿಕೊಳ್ಳಲು ಮತ್ತೊಂದು ವಿಧಾನ ಎಂದರೆ ಎರಡರಿಂದ ಮೂರು ಕ್ಯಾರೆಟನ್ನು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ ನಂತರ ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಕಲಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ ನಂತರ ಇದನ್ನು 20ರಿಂದ 30 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ಮತ್ತೊಂದು ಉಪಾಯ ಅಂದರೆ ನಿಂಬೆರಸ, ಅರ್ಧ ನಿಂಬೆಹಣ್ಣನ್ನು ಹಿಂಡಿಕೊಂಡು ಅದಕ್ಕೆ ಎರಡು ಚಮಚ ನೀರನ್ನು ಹಾಕಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು ಇದು ಕೂಡ ಮುಖದ ಚರ್ಮದ ಸುಕ್ಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಆಹಾರ ಪದ್ಧತಿಯಲ್ಲಿ ಹಣ್ಣು-ತರಕಾರಿ , ಡ್ರೈಫ್ರೂಟ್ಸ್ ಎಲ್ಲವನ್ನು ಚೆನ್ನಾಗಿ ತಿನ್ನಬೇಕು ಮತ್ತು ಪ್ರತಿನಿತ್ಯ ಕನಿಷ್ಠ ಎಂದರೂ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಇನ್ನು ಅಲೋವೆರಾ ನಮಗೆ ತುಂಬಾನೇ ಸಹಾಯಕಾರಿಯಾಗಿದೆ ಅಲೋವೆರಾ ಜೆಲ್ ಅನ್ನು ರಾತ್ರಿ ಮುಖಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ಬೆಳಿಗ್ಗೆ ತೊಳೆಯಬೇಕು ಈ ರೀತಿ ಮಾಡುವುದರಿಂದ ಮುಖದಲ್ಲಿ ತೇವಾಂಶ ಹೆಚ್ಚುತ್ತದೆ ಮತ್ತು ಮುಖದಲ್ಲಿನ ಸುಕ್ಕು ಕಡಿಮೆಯಾಗುತ್ತದೆ ಮತ್ತು ನಾವು ಮಲಗುವ ವಿಧಾನವನ್ನು ಸರಿಪಡಿಸಿಕೊಳ್ಳಬೇಕು.

ಒಂದೇ ಭಾಗಕ್ಕೆ ತಿರುಗಿ ಮುಖವನ್ನು ದಿಂಬಿಗೆ ಒತ್ತಿ ಮಲಗುವುದರಿಂದ ಮುಖಕ್ಕೆ ರಕ್ತಸಂಚಾರವಾಗದೆ ಮುಖದಲ್ಲಿ ಸುಕ್ಕು ಹೆಚ್ಚುತ್ತದೆ ಆದ್ದರಿಂದ ಅಂಗಾತವಾಗಿ ಮಲಗುವುದನ್ನು ರೂಢಿ ಮಾಡಿಕೊಳ್ಳಬೇಕು. ಒಳ್ಳೆಯ ನಿದ್ದೆಯೂ ಕೂಡ ನಮಗೆ ತುಂಬಾ ಮುಖ್ಯ ಮತ್ತು ಮಲಗುವ ಶೈಲಿಯು ನಮಗೆ ತುಂಬಾ ಮುಖ್ಯವಾಗಿದೆ ಆದ್ದರಿಂದ ನಾವು ಹೇಳಿರುವ ಎಲ್ಲಾ ವಿಧಾನವನ್ನು ಮಾಡಿ ನೋಡಿ ನಿಮಗೆ ಒಂದರಿಂದ ಎರಡು ತಿಂಗಳ ಒಳಗೆ ಚರ್ಮದ ಸುಕ್ಕು ಕಡಿಮೆಯಾಗುತ್ತದೆ.