ನಮಸ್ಕಾರ,
ಸುಮಾರು 800 ವರ್ಷಗಳ ಇತಿಹಾಸ ವಿರುವ ವಿಶೇಷ ಪವಾಡ ಕ್ಷೇತ್ರದ ಬಗ್ಗೆ ಈ ವಿಡಿಯೋ ದಲ್ಲಿ ತಿಳಿಸಲಾಗಿದೆ. ನೀವಿನ್ನು ನಮ್ಮ ಡಿವೈನ್ ಮಿಡಿಯಾ ಚಾನಲ್ ಗೆ subscribe ಮಾಡಕೊಂಡಿಲ್ಲ ಅಂದರೆ ಈ ಕೂಡಲೇ subscribe ಮಾಡಿಕೊಳ್ಳಿ ಪಕ್ಕದಲ್ಲೆ ಕಾಣುವ ಬೆಲ್ ಐಕಾನ್ ಪ್ರೆಸ್ ಮಾಡಿದರೆ ನಾವು ಹಾಕುವ ಪ್ರತಿಯೊಂದು ದೈವ ಮಾಹಿತಿಗಳು ನಿಮ್ಮ ಪೋನ್ ಗೆ ಉಚಿತವಾಗಿ ಬರುತ್ತದೆ. ಜಗತ್ತಿನ ಅದ್ಭುತ ದೇವಾಲಯಗಳಲ್ಲಿ ಈ ದೇವಾಲಯ ಬಹಳ ಪ್ರಸಿದ್ದಿಯನ್ನು ಪಡೆದಿದೆ ಕಾರಣ ಇಲ್ಲಿನ ಅಪರೂಪದ ಸಂಗಮದ ಭಕ್ತಿ ಪರಾಕಾಷ್ಠೆ. ಕೇವಲ ಒಂದೇ ರಾತ್ರಿಯಲ್ಲಿ ನಿರ್ಮಾಣವಾದ ದೇಗುಲವಿದು ಹಾಗೂ ಧರ್ಮದ ನ್ಯಾಯದ ಪ್ರತೀಕವಾಗಿ ಕೋಟ್ಯಾಂತರ ಭಕ್ತರ ಸಕಲ ಇಷ್ಟಗಳನ್ನು ಈಡೇರಿಸುವ ಮಹಾ ಕ್ಷೇತ್ರವಿದು. ಒಮ್ಮೆ ಇಲ್ಲಿಗೆ ಬಂದರೆ ನಿಮ್ಮ ಮನಸಿನ ಆಸೆಗಳು ಪೂರ್ಣಗೊಳ್ಳುತ್ತವೆ ಹಾಗೂ ಅಲ್ಲಿರುವ ಮಹಾಶಕ್ತಿಯ ಅನುಗ್ರಹದಿಂದ ಜೀವನದಲ್ಲಿನ ಅತ್ಯಂತ ಕೆಟ್ಟದಿನಗಳು ಸಹ ನಮಗೆ ವರವಾಗಿ ಮಾರ್ಪಡು ಮಾಡುವ ದೇವಾಲಯವಿದು. ಇಲ್ಲಿಗೆ ನೀವು ಒಳ್ಳೆಯ ಮನಸಿನಿಂದ ಯಾವುದೇ ಕಷ್ಟವಿರಲಿ,ದುಃಖವಿರಲಿ ಒಮ್ಮೆ ಭೇಟಿ ನೀಡಿದರೆ ಸಾಕು ಸಕಲ ಸಂಕಷ್ಟಗಳನ್ನು ಕಳೆಯುತ್ತಾನೆ ಇಲ್ಲಿನ ಮಹಾದೈವ.ಸಂತಾನವಾಗದೆ ಎಷ್ಟೊ ಆಸ್ಪತ್ರೆ ಅಲೆದರು ಮಕ್ಕಳಾಗದ ದಂಪತಿಗಳು ಕೇವಲ ತಮ್ಮ ಮನೆಯಿಂದಲೇ ಈ ದೇವರಿಗೆ ಹರಕೆ ಹೊತ್ತು ಮಕ್ಕಳಾಗಿರುವ ಲಕ್ಷಾಂತರ ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ. ಜೀವನದಲ್ಲಿ ಏಳಿಗೆ ಕಾಣದೆ ಸದಾಕಾಲ ಸಾಲದ ಸುಳಿಗೆ ಸಿಲುಕಿರುವ ಅದೆಷ್ಟೊ ಭಕ್ತರ. ಕಷ್ಟಗಳನ್ನು ಕೇವಲ ದೇವಾಲಯಕ್ಕೆ ಭೇಟಿ ನೀಡಿದ 15 ದಿನಗಳಲ್ಲಿ ಅವರ ವ್ಯಾಪಾರ ಅಭಿವೃದ್ದಿ ಹೊಂದಿ ಜೀವನದಲ್ಲಿ ಸಕಲ ಭಾಗ್ಯಗಳನ್ನು ಪಡೆದಿದ್ದಾರೆ. ನಂಬಿ ಮೋಸ ಹೋಗಿ ದಾರಿಯೆ ಕಾಣದ ಅದೆಷ್ಟೊ ನೊಂದ ಮನಸುಗಳಿಗೆ ನ್ಯಾಯ ಧರ್ಮ ಮಾರ್ಗದಲ್ಲಿ ಅವರಿಗೆ ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ಶಿಕ್ಷೆ ನೀಡಿರುವ ಮತ್ತು ನೀಡುತ್ತಿರುವ ಧರ್ಮದೇವತೆಗಳು, ಧರ್ಮ ಕಾರ್ಯವನ್ನು ನಡೆಸಿ ಸಾಕ್ಷಾತ್ ಮಹಾಶಿವನೆ ನೆಲೆಸಿರುವ ಪ್ರಖ್ಯಾತ ಧರ್ಮಕ್ಷೇತ್ರವೇ ನಮ್ಮ ಹೆಮ್ಮೆಯ ಕರ್ನಾಟಕದ ಶ್ರೀ ಕ್ಷೇತ್ರ ಶ್ರೀ ಶ್ರೀ ಧರ್ಮಸ್ಥಳ.
ಕೈಲಾಸದೊಡೆಯ ಮಹಾಶಿವ ಶ್ರೀ ಮಂಜುನಾಥನ ಅವತಾರದಲ್ಲಿ ಈ ಕ್ಷೇತ್ರದಲ್ಲಿ ನೆಲೆ ನಿಂತು ನಂಬಿ ಬಂದ ಭಕ್ತರ ಕಷ್ಟಗಳನ್ನು ಕಳೆಯುತ್ತಿದ್ದಾರೆ. ಈ ಧರ್ಮಸ್ಥಳದ ಇತಿಹಾಸ ಕೇಳಿದರೆ ಸಾಕು ಸಕಲ ಜನ್ಮಗಳ ಪಾಪಾಗಳು ಕಳೆದು ಹೋಗುತ್ತದೆ. ಧರ್ಮಸ್ಥಳದ ಮೂಲ ಹೆಸರು ಕುಡಮಾ ಇಲ್ಲಿ ಬೀಮಣ್ಣ ಪೇರ್ಗಡೆ ಮತ್ತು ಅಮು ಬಲ್ಲಾಳ್ತಿ ಎಂಬ ಇಬ್ಬರು ಸತಿ ಪತಿ ಇರುತ್ತಾರೆ. ಇವರು ಪ್ರತಿದಿನವು ಯಾರಾದರು ಅತಿಥಿಗಳಿಗೆ ಸತ್ಕಾರ ಮಾಡುತ್ತಿರುತ್ತಾರೆ ಇವರ ಈ ಭಕ್ತಿಯನ್ನು ಮೆಚ್ಚಿದ ನಾಲ್ಕುಜನ ಅತಿಥಿಗಳು ಇವರ ಮನೆಗೆ ಬಂದು ಸತ್ಕಾರ ಸ್ವೀಕರಿಸಿ ಹೋಗುತ್ತಾರೆ. ನಂತರ ಅದೇ ದಿನ ರಾತ್ರಿ ಭಿಮಣ್ಣ ಪೇರ್ಗಡೆ ಗೆ ಕನಸಿನಲ್ಲಿ ನಾಲ್ಕು ಜನ ಅತಿಥಿಗಳು ಬಂದು ನಾವು ಧರ್ಮದೇವತೆಗಳು ನಮಗೆ ನಿಮ್ಮ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾರೆ ಆಗ ಭೀಮಣ್ಣ ಪೇರ್ಗಡೆಯವರು ತಾವು ವಾಸವಿದ್ದ ಮನೆಯನ್ನು ಧರ್ಮ ದೇವತೆಗಳಾದ ಕಾಳರಾಹು,ಕಾಳಕಾಯಿ,ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ಅಲ್ಲಿ ನೆಲೆ ನಿಂತರು ನಂತರ ದಂಪತಿ ಬ್ರಾಹ್ಮಣ ಪೂಜಾರಿಗಳನ್ನು ಕರೆಸಿ ನಿತ್ಯವು ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು ಒಮ್ಮೆ ಒಬ್ಬ ಸಾಧುಗಳ ಅಣತಿಯಂತೆ ಈ ಧರ್ಮದೈವಗಳ ಪಕ್ಕದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುವಂತೆ ತಿಳಿಸುತ್ತಾರೆ ಆಗ ದಂಪತಿಗಳು ಅಲ್ಲಿನ ಶಕ್ತಿ ಅಣ್ಣಪ್ಪಸ್ವಾಮಿಯವರಿಗೆ ಲಿಂಗ ತರಲು ಕಳಿಸದ್ದರಂತೆ ಮಂಗಳೂರಿನ ಕದ್ರಿಯಿಂದ ಲಿಂಗವನ್ನು ತರುವಷ್ಟರಲ್ಲಿ ಧರ್ಮದೇವತೆಗಳು ದೇವಾಲಯವನ್ನು ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ತದನಂತರ ಶ್ರೀ ವಾದಿರಾಜರ ಗುರುಗಳಿಂದ ಶಿವಲಿಂಗವನ್ನು ಪ್ರತಿಷ್ಠಾನ ಮಾಡಿ ದಿನ ನಿತ್ಯ ಪೂಜಾ ಕೈಂಕರ್ಯಗಳನ್ನು ನೇರೆವೆರೆಸುತ್ತಿದ್ದಾರೆ. ಧರ್ಮ ದೇವತೆಗಳಿಂದ ನಿರ್ಮಾಣಗೊಂಡ ಈ ಕ್ಷೇತ್ರದ ಶಿವನ ದೇಗುಲವನ್ನು ಧರ್ಮಸ್ಥಳ ಎಂದು ಕರೆಯುತ್ತಾರೆ. ಇಲ್ಲಿನ ಶಿವನ ಲಿಂಗವು ಬಹಳ ಶಕ್ತಿಶಾಲಿಯಾಗಿದ್ದು ಜೊತೆಗೆ ಇಲ್ಲಿ ಧರ್ಮದೇವತೆಗಳು ನೆಲೆ ನಿಂತಿರೊದರಿಂದ ಯಾರು ಇಲ್ಲಿಗೆ ಬಂದು ಹೋಗುತ್ತಾರೊ ಅವರ ಜೀವನದಲ್ಲಿನ ಕಷ್ಟ ಗಳನ್ನು ಕಳೆಯುತ್ತಾನೆ ಮಂಜುನಾಥಸ್ವಾಮಿ. ಮನಸು ಶುದ್ಧವಾಗಿದ್ದರೆ ಧರ್ಮದೇವತೆಗಳ ಆಶೀರ್ವಾದ ಕೂಡ ಸಿಗುತ್ತದೆ. ನಿಮ್ಮ ಯಾವುದೇ ಕಷ್ಟವಿದ್ದರು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ಸಾಕು. ಅಥವಾ ಮನೆಯಿಂದಲೇ ಮಹಾಶಕ್ತಿ ಮಂಜುನಾಥೇಶ್ವರನ ಆರಾಧನೆ ಮಾಡಿದರೆ ಎಂತಹ ಕಠಿಣ ಕೆಲಸವಿದ್ದರು ಸುಲಭವಾಗಿ ಆಗುತ್ತದೆ. ಇಂತಹ ಮಹಾ ಕ್ಷೇತ್ರ ಧರ್ಮಕ್ಷೇತ್ರವಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ. ಈ ಮಾಹಿತಿ ಇಷ್ಟವಾದರೆ ಜೈ ಮಂಜುನಾಥ ಅಂತ ಕಾಮೆಂಟ್ ಮಾಡಿ ಮತ್ತೊಂದು ದೈವ ಮಾಹಿತಿಗಾಗಿ ನಮ್ಮ ಚಾನಲ್ ಗೆ ಭೇಟಿ ನೀಡಿ
